Home
ಶಹಾಪುರಃ ಅಕ್ರಮ ಮಧ್ಯ ಮಾರಾಟ ಇಬ್ಬರ ಬಂಧನ
ಶಹಾಪುರಃ ಅಕ್ರಮ ಮಧ್ಯ ಮಾರಾಟ ಇಬ್ಬರ ಬಂಧನ, ಕೋವಿಡ್ ನಿಯಮ ಉಲ್ಲಂಘನೆ ನಾಲ್ವರ ಮೇಲೆ ಪ್ರಕರಣ ದಾಖಲು
ಯಾದಗಿರಿಃ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಭೀಮರಾಯನ ಗುಡಿ ಠಾಣಾ ವ್ಯಾಪ್ತಿ ನಡೆದಿದೆ.
ಈ ಕುರಿತು ಪ್ರಕಟಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲೆಯ ಶಹಾಪುರ ತಾಲೂಕಿನ ಶಖಾಪುರ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಮಧ್ಯ ಮಾರಾಟದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಆರೋಪಿತರಿಂದ 42 ಓರಿಜನಲ್ ಚ್ವೈಸ್ ಬಾಟಲ್ ಮತ್ತು 1475 ರೂ.ನಗದು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘನೆ ನಾಲ್ವರ ವಿರುದ್ಧ ಪ್ರಕರಣ ದಾಖಲು
ಜಿಲ್ಲೆಯ ಯಾದಗಿರಿ ನಗರದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಇಬ್ಬರು ಮತ್ತು ಸುರಪುರ ತಾಲೂಕಿನ ಕೊಡೆಕಲ್ ಠಾಣಾ ವ್ಯಾಪ್ತಿಯ ಕಕ್ಕೇರಾದಲ್ಲಿ ಇಬ್ಬರ ವಿರದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಇದೇ ವೇಳೆ ಎಸ್ಪಿ ವೇದಮೂರ್ತಿ ಮಾಹಿತಿ ನೀಡಿದ್ದಾರೆ.