ಪ್ರಮುಖ ಸುದ್ದಿ
ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಚಲಿಸುತ್ತಿರುವ ಬೈಕ್ ಗೆ ಎದುರಾದ ಚಿರತೆ

ಚಿರತೆ ಕಂಡು ಗಾಬರಿಯಾದ ಬೈಕ್ ಸವಾರ
ಮೈಸೂರಃ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿರುವ ಬೈಕ್ ಸವಾರನಿಗೆ ಮಾರ್ಗ ಮಧ್ಯ ಕಾನನದೊಳಗಿಂದ ದುತ್ತನೆ ಚಿರತೆಯೊಂದು ಎದುರಾಗಿದೆ. ಈ ಕುರಿತು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರಣ ಚಾಮುಂಡಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರು, ಭಕ್ತರು ಜಾಗೃತವಾಗಿರಬೇಕು.ಚಾಮುಂಡಿ ಮಾರ್ಗ ಮಧ್ಯ ಚಿರತೆಗಳು ಕಾಣಿಸುತ್ತಿದ್ದು, ಅಪಾಯದ ಮುನ್ಸೂಚನೆ ತೋರಿ ಬರುತ್ತಿದೆ. ನಾಗರಿಕರು ಎಚ್ಚೆತ್ತುಕೊಂಡು ಅತ್ತ ಪಯಣ ಬೆಳೆಸುವದು ಉತ್ತಮ.
ಲಲಿತಾದ್ರಿ ವೃತ್ತದ ಬಳಿ ರಾತ್ರಿ ಹೊತ್ತು ಚಿರತೆಗಳ ಚಲನವಲನವು ಕಂಡು ಬಂದಿದೆ ಎನ್ನಲಾಗಿದೆ. ಈ ಕುರಿತು ಸಾರ್ವಜನಿಕರು ಮೈತುಂಬ ಕಣ್ಣಾಗಿಸಿಕೊಂಡು ಸಂಚಾರ ಮಾಡಬೇಕೆಂಬುದು ಸಾಮಾಜಿಕ ಜಾಲತಾಣದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.