ಚಂದ್ರಗ್ರಹಣ ಕುರಿತು ಒಂದಿಷ್ಟು ಮಾಹಿತಿ, ಗರ್ಭೀಣಿಯರು ಏನು ಮಾಡಬೇಕು.!
ಚಂದ್ರಗ್ರಹಣ ಯಾವ್ಯಾವ ನಕ್ಷತ್ರ ಏನು ಫಲ
ಚಂದ್ರಗ್ರಹಣ ಕುರಿತು ಒಂದಿಷ್ಟು ಮಾಹಿತಿ, ಗರ್ಭೀಣಿಯರು ಏನು ಮಾಡಬೇಕು.!
ವಿವಿ ಡೆಸ್ಕ್ಃ ವರ್ಷದ ಕೊನೆಯ ಚಂದ್ರ ಗ್ರಹಣವು ವೃಷಭ, ವೃಶ್ಚಿಕ ಮತ್ತು ಕುಂಭ ರಾಶಿಯ ಜನರಿಗೆ ಶುಭವಾಗಿರುತ್ತದೆ. ಆದ್ರೆ ಮೇಷ, ಕನ್ಯಾ, ತುಲಾ, ಮಕರ ಮತ್ತು ಮೀನ ರಾಶಿಯ ಜನರು ವಿಶೇಷ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕಾಗುತ್ತದೆ.
– ಹಿಂದೂ ನಂಬಿಕೆಯ ಪ್ರಕಾರ, ಚಂದ್ರ ಗ್ರಹಣದ ಸೂತಕ ಅವಧಿ ಯಾವಾಗಲೂ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಹೀಗಾಗಿ ಚಂದ್ರ ಗ್ರಹಣವು ಶನಿವಾರ ಸಂಜೆ 4 ಗಂಟೆಯಿಂದ ಪ್ರಾರಂಭವಾಗುತ್ತದೆ.
ಹಿಂದೂಗಳ ನಂಬಿಕೆಯ ಪ್ರಕಾರ, ಸೂತಕ ಅವಧಿಯಲ್ಲಿ ಪೂಜೆ ಆಗಲಿ ಅಡುಗೆಯಾಗಲಿ ಮಾಡಬಾರದು. ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನ ಮಾಡಬಾರದು.
ಚಂದ್ರ ಗ್ರಹಣವನ್ನ ಪ್ರಮುಖ ದೋಷವೆಂದು ಪರಿಗಣಿಸಲಾಗಿದ್ದು, ಈ ಸಮಯದಲ್ಲಿ ಗರ್ಭಿಣಿಯರಿಗೆ ವಿಶೇಷವಾಗಿ ಜಾಗರೂಕರಾಗಿರಲು ತಿಳಿಸಲಾಗಿದೆ.
ಹಿಂದೂ ಧರ್ಮದಲ್ಲಿ ಅಶುಭ ಘಟನೆ ಎಂದು ಪರಿಗಣಿಸಲಾದ ಚಂದ್ರಗ್ರಹಣವು ಇಂದು (28 ಅಕ್ಟೋಬರ್ 2023) ಸಂಭವಿಸಲಿದೆ. ಶರದ್ ಪೂರ್ಣಿಮೆಯ ದಿನದಂದು ಇದು ವರ್ಷದ ಕೊನೆಯ ಚಂದ್ರಗ್ರಹಣವಾಗಿದ್ದು, ಇದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಗೋಚರಿಸುತ್ತದೆ.