ಬೆಳಗಾವಿಃ 46 ಮಕ್ಕಳಿಗೆ ಒಕ್ಕರಿಸಿದ ಕೊರೊನಾ
ಬೆಳಗಾವಿಃ 46 ಮಕ್ಕಳಿಗೆ ಒಕ್ಕರಿಸಿದ ಕೊರೊನಾ
ಬೆಳಗಾವಿಃ ಜಿಲ್ಲೆಯಲ್ಲಿ ಎರಡೇ ದಿನದಲ್ಲಿ 46 ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ ಎನ್ನಲಾಗಿದೆ.
18 ವರ್ಷದೊಳಗಿನ 20 ಬಾಲಕಿಯರು ಮತ್ತು 26 ಜನ ಬಾಲಕರಿಗೆ ಕೊರೊನಾ ಅಂಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಇದೆಲ್ಲವನ್ನು ಗಮನಿಸುತ್ತಿದ್ದರೆ 3 ನೇ ಅಲೆ ಕೊರೊನಾ ಮಕ್ಕಳ ಮೇಲೆ ದಾಳಿ ನಡೆಸುತ್ತಿದೆ ಎಂಬ ಅಂಶ ಬಯಲಾಗುತ್ತಿದೆ. ಆಯಾ ಜಿಲ್ಲೆಗಳಲ್ಲಿ ಮಕ್ಕಳ ಮೇಲೆ ಅಲ್ಲಲ್ಲಿ ಕೊರೊನಾ ಆವರಿಸುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.
ಕೊರೊನಾ ಪ್ರಕರಣ ಕಡಿಮೆಯಾಗಿದೆ ಎಂಬ ಭ್ರಮೆಯಲ್ಲಿ ನಿಯಂತ್ರಣವನ್ನು ಸಡಿಲಿಸಿದಲ್ಲಿ ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರಿದ ಮೇಲೆ ಒದ್ದಾಡುವ ಸ್ಥಿತಿ ಎದುರಾಗಬಾರದು.
ಆ ಕಾರಣಕ್ಕೆ ಮುಂಜಾಗೃತವಾಗಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಸರ್ಕಾರ ಆಯಾ ಜಿಲ್ಲಾಡಳಿತ ಮಾಡಿಕೊಳ್ಳುವದು ಅಗತ್ಯವಿದೆ.
ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಮೇಲೆ ವ್ಯಾಪಕವಾಗಿ ಕೊರೊನಾ ಹರಡುತ್ತಿದೆ. ಪೋಷಕರು ತೀವ್ರ ನಿಗಾವಹಿಸುವ ಮೂಲಕ ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸುವ ಕಾಳಜಿ, ಜವಬ್ದಾರಿ ಪೋಷಕರದ್ದಾಗಿದೆ.