ರಾಜಾಪುರ ಗ್ರಾಮದಲ್ಲಿ ಚಿರತೆ ಮರಿ ಪತ್ತೆ ಸುಳ್ಳು ವದಂತಿ
ರಾಜಾಪುರ ಗ್ರಾಮದಲ್ಲಿ ಚಿರತೆ ಮರಿ ಪತ್ತೆ ಸುಳ್ಳು ವದಂತಿ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಚಿರತೆ ಮರಿಗಳು ಪತ್ತೆಯಾಗಿವೆ ಎಂದು ವರದಿಯಾಗಿರುವದು ಶುದ್ಧ ಸುಳ್ಳು ಎನ್ನಲಾಗಿದ್ದು, ಇದೊಂದು ವದಂತಿಯಾಗಿದೆ ಯಾರೊಬ್ಬರು ಗ್ರಾಮಸ್ಥರು ಹೆದರುವ ಅಗತ್ಯ ವಿಲ್ಲ ಎಂದು ಭೀಮರಾಯನ ಗುಡಿ ಉಪ ವಲಯ ಅರಣ್ಯಾಧಿಕಾರಿ ಐ.ಬಿ.ಹೂಗಾರ ತಿಳಿದಿದ್ದಾರೆ.
ಯಾರೋ ಸಾಮಾಜಿಕ ಜಾಲತಾಣದಲ್ಲಿ ರವಿವಾರ ರಾಜಾಪುರ ಗ್ರಾಮ ವ್ಯಾಪ್ತಿಯ ಹೊರವಲಯದಲ್ಲಿ ಚಿರತೆ ಮರಿಗಳು ದೊರೆತಿವೆ ಎಂದು ಎಲ್ಲೋ ಬೇರಡೆ ವಿಡಿಯೋವೊಂದು ವೈರಲ್ ಮಾಡಿದ್ದು, ಬೇರೆಡೆ ಚಿರತೆ ಮರಿಗಳು ಕೈಯಲ್ಲಿಡಿದ ಫೋಟೊಗಳು ಹರೊದಾಡುತ್ತಿವೆ.
ಈ ರೂಮರ್ ಆಗಿದ್ದು, ರಾಜಾಪುರ ಗ್ರಾಮದಲ್ಲಿ ಚಿರತೆ ಮರಿಗಳು ದೊರೆತಿರುವದಿಲ್ಲ. ಮತ್ತು ಶನಿವಾರ ರಾಜಾಪುರ ದಿಂದ ಗೋಗಿ ಗ್ರಾಮಕ್ಕೆ ತೆರಳುವಾಗ ಮಾರ್ಗ ಮಧ್ಯೆ ಚಿರತೆ ನೋಡಿದ್ದೇನೆ ಎಂದು ಮಾಹಿತಿ ನೀಡಿರುವದರಿಂದ ಅರಣ್ಯಾಧಿಕಾರಿಗಳ ತಂಡ ಆ ಪ್ರದೇಶವೆಲ್ಲ ಜಾಲಾಡಿದ್ದು ಎಲ್ಲೂ ಚಿರತೆ ಹೆಜ್ಜೆಯ ಕುರುಗಳು ದೊರೆತಿರುವದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೆ ರವಿವಾರ ಚಿರತೆ ಮರಿಗಳು ದೊರೆತಿವೆ ಎಂಬುದು ಸುಳ್ಳು ವದಂತಿಯಾಗಿದ್ದು, ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ.
ಯಾರೋ ಕಿಡಿಗೇಡಿಗಳು ಬೇರೆ ಕಡೆಯ ವಿಡಿಯೋ ತುಣುಕು,ಫೋಟೊಗಳು ಹರಿಬಿಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಕುರಿತು ಯಾರೊಬ್ಬರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ರೈತರು ಜಮೀನಿಗೆ ನೀರು ಬಿಡಲು, ಇತರೆ ಕೃಷಿ ಚಟುವಟಿಕೆಗೆ ತೆರಳುವಾಗ ಒಬ್ಬರೆ ಹೋಗದೆ ಮುನ್ನೆಚ್ವರಿಕೆವಹಿಸಿ ಜೊತೆಯಾಗಿ ಇಬ್ಬರು ಮೂವರು ತೆರಳಬೇಕೆಂದು ಸಲಹೆ ನೀಡಲಾಗಿದೆ ಎಂದು ಅರಣ್ಯಾಧಿಕಾರಿ ಹೂಗಾರ ಅವರು ತಿಳಿಸಿದ್ದಾರೆ.