ಪ್ರಮುಖ ಸುದ್ದಿ
ಸಿಎಂ ಬದಲಾವಣೆಃ ನನ್ನ ಪರ ಹೇಳಿಕೆ, ಪ್ರತಿಭಟನೆ ಬೇಡ – ಯಡಿಯೂರಪ್ಪ ಮನವಿ
ಪಕ್ಷ ನನಗೆ ಮಾತೃ ಸಮಾನ, ಗೌರವಕ್ಕೆ ಚ್ಯುತಿ ತರಬೇಡಿ-BSY
ಬೆಂಗಳೂರಃ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಿಸಿ ಬಿಸಿ ಸುದ್ದಿ ಕುರಿತು ಮೌನ ಮುರಿದ ಸಿಎಂ ಯಡಿಯೂರಪ್ಪ ಪಕ್ಷ ನನಗೆ ಮಾತೃ ಸಮಾನ ಆ ಗೌರವಕ್ಕೆ ಚ್ಯುತಿ ತರಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ರಾಜಕೀಯ ಬೆಳವಣಿಗೆ ಆಧರಿಸಿ ನನ್ನ ಪರ ಸಮುದಾಯದಿಂದಾಗಲಿ ಅಭಿಮಾನದಿಂದಾಗಲಿ ಪ್ರತಿಭಟನೆ, ಹೇಳಿಕೆ ಯಾರು ನೀಡಬೇಡಿ. ಅದರಿಂದ ವರಿಷ್ಠರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಅವರು ಮಾಧ್ಯಮ ಮೂಲಕ ಮನವಿ ಮಾಡಿದ್ದಾರೆ.
ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಅದು ಹೈಕಮಾಂಡ್ ಗೆ ಬೇರೆಯೇ ಸಂದೇಶ ಹೋಗುತ್ತಿದೆ. ಕಾರಣ ಯಾರೊಬ್ಬರು ನನ್ನ ಪರವಾಗಿ ಹೋರಾಟ, ಹೇಳಿಕೆ ಮಾಡಬಾರದೆಂದು ಅವರು ಮನವಿ ಮಾಡಿದ್ದಾರೆ.