ಕೇರಳಃ ವಾರಾಂತ್ಯ 2 ದಿನ ಲಾಕ್ ಡೌನ್, ಕರ್ನಾಟಕಕ್ಕೂ ಕಂಟಕ
ಕೇರಳಃ ವಾರಾಂತ್ಯ 2 ದಿನ ಲಾಕ್ ಡೌನ್
ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ಕರ್ನಾಟಕಕ್ಕೂ ಅಪಾಯದ ಎಚ್ಚರಿಕೆ
ವಿವಿ ಡೆಸ್ಕ್ಃ ರಾಜ್ಯದ ಪಕ್ಕದ ರಾಜ್ಯ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರತೆ ಪಡೆದುಕೊಂಡಿದೆ. ದಿನವೊಂದಕ್ಕೆ 20 ಸಾವಿರ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು ಕೇರಳ ತೀವ್ರ ಆತಂಕದಲ್ಲಿದೆ.
ಮಂಗಳವಾರ ಒಂದೇ ದಿನ 22 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೊರೊನಾ ಮಾರ್ಗಸೂಚಿ ಬದಲಾಯಿಸಲಾಗಿದ್ದು ವಾರಾಂತ್ಯ ಎರಡು ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.
ಕೊರೊನಾ ತೀವ್ರತೆ ಜಾಸ್ತಿಯಾಗುತ್ತಿದ್ದು, ಕರ್ನಾಟಕ ನಿರ್ಲಕ್ಷ ವಹಿಸಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ವರದಿ ತಜ್ಞರು ನೀಡಿದ್ದಾರೆ ಎನ್ನಲಾಗಿದೆ.
ಕೊರೊನಾ ಎರಡು ಡೋಸ್ ಗೆ ಸಾಕಾಗುವದಿಲ್ಲ. ಬೂಸ್ಟರ್ ಡೋಸ್ ನೀಡುವಸು ಅಗತ್ಯವೆಂದು ಅಂತರಾಷ್ಟ್ರೀಯ ತಜ್ಞರು ಸೂಚಿಸಿದ್ದಾರೆ ಎನ್ನಲಾಗಿದೆ.
3 ನೇ ಡೋಸ್..
ಅಮೇರಿಕಾ ಸೇರಿದಂತೆ ಇತರೆ ದೇಶಗಳಲ್ಲಿ ಬೂಸ್ಟರ್ ಡೋಸ್ ನೀಡುವ ಹಂತದಲ್ಲಿದ್ದು, ಭಾರತದಲ್ಲೂ 3 ನೇ ಡೋಸ್ ನೀಡುವ ಚಿಂತನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.