ಪ್ರಮುಖ ಸುದ್ದಿ
ಯಾವ್ಯಾವ ಜಿಲ್ಲೆಗಳಲ್ಲಿ ನಾಳೆಯಿಂದಲೇ ವಾರಾಂತ್ಯ ಲಾಕ್ ಡೌನ್ ಇಲ್ಲಿದೆ ಮಾಹಿತಿ
ರಾತ್ರಿ 9 ಗಂಟೆಯಿಂದಲೇ ನೈಟ್ ಕರ್ಫ್ಯೂ ಜಾರಿ, ಗಡಿಯಲ್ಲಿ ವಾರಾಂತ್ಯ ಲಾಕ್ ಡೌನ್ – ಸಿಎಂ ಸೂಚನೆ
ಬೆಂಗಳೂರಃ ಕೊರೊನಾ ನಿಯಂತ್ರಣಕ್ಕಾಗಿ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಇಂದಿನಿಂದ ರಾತ್ರಿ 10 ರ ಬದಲು 9 ಗಂಟೆಯಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜನರು ಸಹಕರಿಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಗಯದಲ್ಲಿ ನೈಟ್ ಕರ್ಫ್ಯೂ ಅವಧಿ ವಿಸ್ತರಿಸಲಾಗಿದ್ದು, 10 ಗಂಟೆ ಬದಲು ರಾತ್ರಿ 9 ಗಂಟೆಗೆ ನೈಟ್ ಕರ್ಫ್ಯೂ ಜಾರಿಗೆ ಸೂಚಿಸಲಾಗಿದೆ. ಅಲ್ಲದೆ ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ನಾಳೆ ಶನಿವಾರದಿಂದಲೇ ವಾರಂತ್ಯ ಲಾಕ್ ಡೌನ್ ಗೆ ಸೂಚಿಸಲಾಗಿದೆ.
ಮತ್ತು ಕೇರಳ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮೈಸೂರ, ಮಂಗಳೂರ, ಮಡಿಕೇರಿ ಹಾಗೂ ಮಹಾರಾಷ್ಟ್ರ ಗಡಿಭಾಗದ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬೀದರನಲ್ಲಿ ನಾಳೆಯಿಂದಲೇ ವಾರಾಂತ್ಯ ಲಾಕ್ ಡೌನ್ ಜಾರಿಯಾಗಲಿದೆ ಎಂದು ವಿವರಿಸಿದರು.