ಪ್ರಮುಖ ಸುದ್ದಿ
ಥಿಯೇಟರ್ ನಲ್ಲಿ ಶೇ..50 ರಷ್ಟು ಭರ್ತಿ – ಕೆ.ಸುಧಾಕರ
ಥಿಯೇಟರ್ ನಲ್ಲಿ ಶೇ..50 ರಷ್ಟು ಭರ್ತಿಗೆ ಅವಕಾಶ – ಕೆ.ಸುಧಾಕರ
ಬೆಂಗಳೂರಃ ಕೊರೊನಾ ಮಹಾಮಾರಿ ಮತ್ತೆ ಆರ್ಭಟಿಸುತ್ತಿದ್ದು, ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ. ಎಂಟು ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿಗೊಳಿಸಲು ನಿರ್ಧರಿಸಲಾಗಿತ್ತು.
ಆದರೆ ಆ ಎಂಟು ಜಿಲ್ಲೆಗಳಲ್ಲಿನ ಥಿಯೇಟರ್, ಬಾರ್ ರೆಸ್ಟೋರೆಂಟ್ ಗಳಲ್ಲಿ ಶೇ.50 ರಷ್ಟು ಜನರಿಗೆ ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ ಸ್ಪಷ್ಟ ಪಡಿಸಿದ್ದಾರೆ.
ಈ ಮೊದಲು ಎಂ ಟು ಜಿಲ್ಲೆಗಳಲ್ಲಿ ಸಂಪೂರ್ಣ ಬಂದ್ ಮಾಡಿಸುವ ಯೋಚನೆ ಮಾಡಲಾಗಿತ್ತು. ಇದೀಗ ಹಲವರ ಮನವಿ ಮೇರೆಗೆ ಒಂದಿಷ್ಟು ರೂಲ್ಸ್ ನಲ್ಲಿಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಲ್ಯಾಣ ಮಂಟಪಗಳಲ್ಲಿ 200 ಜನರಿಗೆ ಅವಕಾಶ ಹೊರ ಪ್ರದೇಶದಲ್ಲಿ ಟೆಂಟ್ ಹಾಕಿದ ಮದುವೆಗೆ 500 ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, ಆದರೆ ಮಾಸ್ಕ್, ಸ್ಯಾನಿಟೈಸರ್ ಅಂತರ ಕಾಪಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.