ಸ್ವಕುಳ ಸಾಳಿ ಸಮಾಜದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ
ಸ್ವಕುಳ ಸಾಳಿ ಸಮಾಜದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ
ಯಾದಗಿರಿಃ ಕೊರೊನಾ ಹಾವಳಿಯಿಂದ ಜನ ಸಮುದಾಯ ತತ್ತರಿಸಿ ಹೋಗಿದ್ದು, ಲಾಕ್ ಡೌನ್ ಜಾರಿಯಲ್ಲಿ ಕೆಲಸವು ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ.
ಇದೆಲ್ಲವನ್ನು ಮನಗಂಡ ಇಲ್ಲಿನ ಸ್ವಕುಳ ಸಾಳಿ ಸಮಾಜದವತಿಯಿಂದ ಸಮುದಾಯದ ಮುಖಂಡರು ತಮ್ಮ ಸಮಾಜದ ಅತಿ ಬಡವರಿಗೆ ಕೊರೊನಾ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ 100 ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದರು.
ಒಂದು ಕಿಟ್ ನಲ್ಲಿ 5 ಕೆಜಿ ಅಕ್ಕಿ, 5 ಕೆಜಿ ಗೋದಿ ಹಿಟ್ಟು ಪಾಕೆಟ್, 1 ಕೆಜಿ ತೊಗರಿ ಬ್ಯಾಳಿ, 1 ಲೀಟರ್ ಒಳ್ಳೆಣ್ಣೆ ಪಾಕೆಟ್ ಮತ್ತು 1 ಕೆಜಿ ಸಕ್ಕರೆಯನ್ನು ವಿತರಿಸಲಾಯಿತು ಎಂದು ಸಮಾಜದ ತಾಲೂಕು ಅಧ್ಯಕ್ಷ ರಾಜಕುಮಾರ ಚಿಲ್ಲಾಳ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮಲ್ಲಯ್ಯ ಸಾಹು ಫಿರಂಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಕೊಟ್ರೆಪ್ಪ ದನವಾಡ, ರಾಮು ಮಿರ್ಜಿ, ಸಿದ್ದು ಶಿರವಾಳಕರ್, ಮಾರುತಿ ದಂಡು, ಸಂತೋಷ ಶಿರವಾಳ, ನಾಗೇಂದ್ರ ದಂಡು, ವಿಜಯ ಶಿರವಾಳಕರ್, ನಂದು ಚಿಲ್ಲಾಳ ಸೇರಿದಂತೆ ಇತರರಿದ್ದರು.