ಪ್ರಮುಖ ಸುದ್ದಿ
ಶಹಾಪುರಃ ಕೊರೊನಾ ಲಸಿಕೆ ವಿತರಣೆ
ಶಹಾಪುರಃ ಕೊರೊನಾ ಲಸಿಕೆ ವಿತರಣೆ
ಶಹಾಪುರಃ ಕೊನೆಗೂ ಕೊರೊನಾ ಮಹಾಮಾರಿ ಓಡಿಸುವ ಲಸಿಕೆ ನಗರಕ್ಕೆ ಬಂದೆ ಬಿಡ್ತು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲಿಗೆ 35 ಜನ “ಡಿ” ಗ್ರೂಪ್ ನೌಕರರಿಗೆ ಕೊರೊನಾ ಲಸಿಕೆ ನೀಡಲಾಯಿತು. ಆಸ್ಪತ್ರೆ ಯಲ್ಲಿ ಲಸಿಕೆ ಸಂಭ್ರಮ ಕಂಡು ಬಂದಿತು.
ತದ ನಂತರ ವೈದ್ಯರು ಲಸಿಕೆ ಪಡೆಯಲಿದ್ದು, ಸದ್ಯ ಲಸಿಕೆ ಹಾಕಿಸಿಕೊಂಡ ಎಲ್ಲರೂ ಆರಾಮವಾಗಿದ್ದಾರೆ. ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಈ ಸಂದರ್ಭ ತಾಲೂಕು ವೈಧ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ಆಡಳಿತಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿಕರ, ಡಾ.ಜಗಧೀಶ ಉಪ್ಪಿನ್, ಡಾ.ಚಂದ್ರಶೇಖರ ಚವ್ಹಾಣ ಸೇರಿದಂತೆ ವೈದ್ಯರು,ಆರೊಗ್ಯ ಸಿಬ್ಬಂದಿ ಇತರರಿದ್ದರು.