Homeಅಂಕಣಜನಮನಪ್ರಮುಖ ಸುದ್ದಿವಿನಯ ವಿಶೇಷ

ಕೋವಿಶೀಲ್ಡ್ ನಂತೆ ‘ಕೋವ್ಯಾಕ್ಸಿನ್’ ಕೂಡ ಅಡ್ಡಪರಿಣಾಮಗಳನ್ನು ಹೊಂದಿದೆ: ವರದಿ

ನವದೆಹಲಿ: ಕೋವಿಶೀಲ್ಡ್ ಅಡ್ಡಪರಿಣಾಮದ ಸುದ್ದಿ ಹಸಿರಾಗಿರುವಂತೆಯೇ ಇತ್ತ ಭಾರತದಲ್ಲಿ ವ್ಯಾಪಕವಾಗಿ ನೀಡಲಾಗಿದ್ದ ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮಗಳು ಇವೆ ಎಂಬ ಸ್ಫೋಟಕ ಅಂಶವನ್ನು ನೂತನ ಅಧ್ಯಯನವೊಂದು ಹೊರಹಾಕಿದೆ. ಕೊರೋನಾ ವೈರಸ್‌ ಎದುರಿಸಲು ತೆಗೆದುಕೊಂಡಿರುವ ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಹೊಂದಿದೆ ಎಂಬುದು ಬಯಲಾದ ಬೆನ್ನಲ್ಲಿ ಕೋವಾಕ್ಸಿನ್‌ ತೆಗೆದುಕೊಂಡಿರುವ ಜನ ತಮಗೇನು ಅಪಾಯವಿಲ್ಲ ಎಂದು ನಿರಾಳವಾಗಿದ್ದರು. ಆದರೆ ಇದೀಗ ವರದಿಯೊಂದು ಹೊರಬಿದ್ದಿದ್ದು, ಕೋವಾಕ್ಸಿನ್‌ ಲಸಿಕೆಯೂ ಅಡ್ಡಪರಿಣಾಮ ಹೊಂದಿದೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.

ಇತ್ತೀಚೆಗೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಬ್ರಿಟಿಷ್ ಕಂಪನಿಯಾದ ಅಸ್ಟ್ರಾಜೆನೆಕಾ ಇತ್ತೀಚೆಗೆ ಅಲ್ಲಿನ ನ್ಯಾಯಾಲಯದಲ್ಲಿ ಅದರ ಲಸಿಕೆ ಕೆಲವು ಜನರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು. ಇದೀಗ ಅದೇ ರೀತಿ ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್’ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ವರದಿ ಬಂದಿದೆ. ಬಿಹೆಚ್ ಯು  ಅಧ್ಯಯನದ ಪ್ರಕಾರ, ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದ ಸುಮಾರು ಒಂದು ವರ್ಷದ ನಂತರ, ಅದರ ಅಡ್ಡಪರಿಣಾಮಗಳು ಸಾಕಷ್ಟು ಜನರಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಈ ವರದಿಯ ಪ್ರಕಾರ, ಕೊವಾಕ್ಸಿನ್‌ ತೆಗೆದುಕೊಂಡಿರುವ ಹದಿ ಹರೆಯದವರು ಮತು ಯುವಕರಲ್ಲಿ ಈ ಅಡ್ಡ ಪರಿಣಾಮ ಹೆಚ್ಚಾಗಿ ಕಂಡು ಬಂದಿದೆ. ಈ ಸಂಶೋಧನೆಗಾಗಿ ಒಟ್ಟು 1024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 635 ಹದಿಹರೆಯದವರು ಮತ್ತು 391 ಯುವಕರು ಇದ್ದರು. 304 ಹದಿಹರೆಯದವರು ಅಥವಾ ಸುಮಾರು 48 ಪ್ರತಿಶತದಷ್ಟು ಜನರು ಶ್ವಾಸನಾಳದ ಸೋಂಕಿಗೆ ತುತ್ತಾಗಿರುವುದು ಅಧ್ಯಯನದಲ್ಲಿ ಬಯಲಾಗಿದೆ ಎಂದು ಹೇಳಲಾಗಿದೆ. ‘ಹೊಸ-ಆರಂಭದ ಚರ್ಮ ಮತ್ತು ಸಬ್ಕ್ಯುಟೇನಿಯಸ್ ಅಸ್ವಸ್ಥತೆ’ 10.5 ಪ್ರತಿಶತ ಹದಿಹರೆಯದವರಲ್ಲಿ ಕಂಡುಬಂದಿದ್ದು, ಸಾಮಾನ್ಯ ಅಸ್ವಸ್ಥತೆ ಅಂದರೆ ಸಾಮಾನ್ಯ ಸಮಸ್ಯೆ 10.2 ಪ್ರತಿಶತ, ನರಮಂಡಲದ ಅಸ್ವಸ್ಥತೆ ಅಂದರೆ ನರ ಸಂಬಂಧಿತ ಸಮಸ್ಯೆ 4.7 ಪ್ರತಿಶತ. ಅದೇ ರೀತಿ ಶೇ.8.9ರಷ್ಟು ಯುವಜನರಲ್ಲಿ ಸಾಮಾನ್ಯ ಸಮಸ್ಯೆಗಳು, ಮಸ್ಕ್ಯುಲೋಸ್ಕೆಲಿಟಲ್ ಡಿಸಾರ್ಡರ್ಸ್ ಅಂದರೆ ಸ್ನಾಯುಗಳು, ನರಗಳು, ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಶೇ.5.8ರಷ್ಟು ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಶೇ.5.5ರಲ್ಲಿ ಕಂಡುಬರುತ್ತವೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button