ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಚಕ್ ವಿತರಣೆ
ಕೋವಿಡ್‍ಃ ಪರಿಹಾರ ಚಕ್ ವಿತರಣೆ
yadgiri, ಶಹಾಪುರಃ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಕೋವಿಡ್ ಮಹಾಮಾರಿಯಿಂದ ಮೃತಪಟ್ಟ 16 ಜನರ ಕುಟುಂಬ ಸದಸ್ಯರಿಗೆ ಸರ್ಕಾರದಿಂದ ಬಂದ ತಲಾ ಒಂದು ಲಕ್ಷ ರೂ. ಪರಿಹಾರ ಚಕ್ ನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ವಿತರಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಕುಟುಂಬ ಸದಸ್ಯರಿಗೆ ಕೋವಿಡ್ ಪರಿಹಾರ ಚಕ್ ವಿತರಿಸಿ ಮಾತನಾಡಿದ ಅವರು, ಕೋವಿಡ್ ನಿಂದ ಸಾಕಷ್ಟು ಜನರು ಕಂಗಾಲಾಗಿದ್ದರು. ಕೋವಿಡ್ ತಗುಲಿ ಮೃತ ಪಟ್ಟವರು ಕುಟುಂಬಸ್ಥರು ಯಾವುದೇ ಕಾರಣ ಆತಂಕಕ್ಕೆ ಒಳಗಾಗಬೇಡಿ. ಸರ್ಕಾರಿಂದ ದೊರೆಯುವ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಳಜಿಪೂರ್ವಕವಾಗಿ ಕೆಲಸ ಮಾಡುವೆ. ಬಂದ ಪರಿಹಾರದ ಹಣವನ್ನು ಸದುಪಯೋಗ ಪಡೆಸಿಕೊಳ್ಳಬೇಕು.
ಇನ್ನೂ ಕೋವಿಡ್ ಮಹಾಮಾರಿ ಸಂಪೂರ್ಣವಾಗಿ ದೇಶದಿಂದ ಹೋಗಿಲ್ಲ. ಪ್ರಸ್ತುತವಾಗಿ ರೂಪಾಂತರಗೊಂಡು ಮತ್ತೆ ಕಾಡುವ ಮುನ್ಸೂಚನೆಯನ್ನು ಆರೋಗ್ಯ ಇಲಾಖೆ ನೀಡುತ್ತಿದೆ. ಹೀಗಾಗಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಶಹಾಪುರ-5, ಸಗರ -3, ಗೋಗಿ ಪೇಠ-2, ಗೋಗಿ (ಕೆ), ಇಟಗಿ, ಶಿರವಾಳ, ಚನ್ನೂರ, ರಸ್ತಾಪುರ, ಗುಂಡಾಪುರ ಗ್ರಾಮಗಳಲ್ಲಿ ಮೃತಪಟ್ಟ ತಲಾವೊಬ್ಬರ ಕುಟುಂಬ ಸದಸ್ಯರಿಗೆ ಚಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ ಮಧುರಾಜ್ ಕೂಡ್ಲಿಗಿ, ಚನ್ನಬಸವಣ್ಣ, ಗಿರೀಶ್, ಭೀಮರಡ್ಡಿ, ಚೇತನ್, ಮಹಾದೇವಪ್ಪ ಸಾಲಿಮನಿ ಮತ್ತು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.