ಪ್ರಮುಖ ಸುದ್ದಿ
ತಿಂಥಿಣಿ ಬ್ರಿಡ್ಜ್ ಬಳಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ
ತಿಂಥಿಣಿ ಬ್ರಿಡ್ಜ್ ಬಳಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ
ಯಾದಗಿರಿಃ ವ್ಯಕ್ತಿಯೋರ್ವನ ಬರ್ಬರ ಹತ್ಯಗೈದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಿಣಿ ಬ್ರಿಡ್ಜ್ ಬಳಿ ನಡೆದಿದೆ.
ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮದ ಭೀಮಣ್ಣ ಎಂಬಾತನೆ ಕೊಲೆಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೀಮಣ್ಣ ಮಾಜಿ ತಾಪಂ ಉಪಾಧ್ಯಕ್ಷ ಶಿವರಾಜ ಸಹೋದರನಾಗಿದ್ದಾನೆ. ಕೊಲೆಗೀಡಾದ ವ್ಯಕ್ತಿ ಭೀಮಣ್ಣ (37) ವಿವಾಹಿತೆಯೋರ್ವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಈಚೆಗೆ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ ಎಂಬ ಆರೋಪವಿದೆ.
ಬೆಂಗಳೂರಿನಿಂದ ವಾಪಾಸಾಗಿದ್ದ ಆತನನ್ನು ಕೊಲೆಗೈಲಾಗಿದೆ ಎನ್ನಲಾಗಿದೆ. ವಿವಾಹಿತ ಮಹಿಳೆಯು ಭೀಮಣ್ಣ ವಾಪಾಸಾದ ಕೆಲ ದಿನಗಳ ಬಳಿಕೆ ಬಂದಿದ್ದಳು ಎಂದು ಹೇಳಲಾಗುತ್ತಿದೆ.