ಪ್ರಮುಖ ಸುದ್ದಿ

ಶಹಾಪುರಃ ಯುವಕನ ಅಸ್ವಾಭಾವಿಕ ಸಾವು

ವಿಷ ಸೇವಿಸಿ ಯುವಕ ಆತ್ಮಹತ್ಯೆ.?

ವಿಷ ಸೇವಿಸಿ ಯುವಕ ಆತ್ಮಹತ್ಯೆ.?

ಶಹಾಪುರಃ ಯುವಕನ ಅಸ್ವಾಭಾವಿಕ ಸಾವು

Yadgiri, ಶಹಾಪುರಃ ವಯಕ್ತಿಕ ಕಾರಣಗಳಿಂದ ಮನನೊಂದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಚಾಂದ್ ಪೆಟ್ರೋಲ್ ಬಂಕ್ ಹತ್ತಿರ ಗುರುವಾರ 2 ಗಂಟೆ ಸುಮಾರಿಗೆ ನಡೆದಿದೆ. ಮೃತ ಯುವಕನನ್ನು ತ್ರಿಶೂಲ್ ಭೀಮಣ್ಣ ಗಡಕರ್ (22) ಎಂದು ಗುರುತಿಸಲಾಗಿದೆ.

ಮೃತ ಯುವಕ ತಾಲೂಕಿನ ಮುಡಬೂಳ ಗ್ರಾಮದವರಾಗಿದ್ದು, ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದ ಪೋಸ್ಟ್ ಆಫೀಸ್‍ನಲ್ಲಿ ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದು ಬಂದಿದೆ.

ಈತ ಕರ್ತವ್ಯ ನಿರ್ವಹಿಸುತ್ತಿರುವ ಅಂಚೆ ಕಚೇರಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯವರು ತ್ರಿಶೂಲನ ಮನೆಗೆ ವಿಚಾರಣೆಗೆ ಬಂದಿದ್ದರು ಎಂದು ಸುದ್ದಿ ಎಲ್ಲಡೆ ಹರಡಿದೆ. ತ್ರಿಶೂಲನ ಸಾವಿಗೂ ಇದು ಕಾರಣ ಇರಬಹುದೇ.? ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಸಾವಿಗೂ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಡಿ ಪ್ರಕರಣ ದಾಖಲಾಗಿದೆ.

—————–

Related Articles

Leave a Reply

Your email address will not be published. Required fields are marked *

Back to top button