ಪ್ರಮುಖ ಸುದ್ದಿ
ಪ್ರೇಮ ವೈಫಲ್ಯಃ ಆತ್ಮಹತ್ಯೆಗೆ ಉಪನ್ಯಾಸಕ ಶರಣು
ಅಥಿತಿ ಉಪನ್ಯಾಸಕ ಕೆರೆಗೆ ಜಿಗಿದು ಆತ್ಮಹತ್ಯೆ ಕಾರಣವೇನು ಗೊತ್ತಾ.?
ಕಲ್ಬುರ್ಗಿಃ ನಗರದ ಲಾಲಗೇರಿ ಕ್ರಾಸ್ ಪ್ರದೇಶ ನಿವಾಸಿ ಅಥಿತಿ ಉಪನ್ಯಾಸಕನೋರ್ವ ತಾನು ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕಾಗಿ ಮನನೊಂದು ಇಲ್ಲಿನ ಅಪ್ಪನ ಕೆರೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೂ ಮುನ್ನಾ ಮನೆಗೆ ಕರೆ ಮಾಡಿ ಮಾತನಾಡಿರುವ ಉಪನ್ಯಾಸಕ, ಪ್ರೀತಿ ವೈಫಲ್ಯ ಕಾರಣ ತಿಳಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಒಯ್ದಿದ್ದಾರೆ. ಘಟನೆ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.