ಅಪರಿಚಿತ ಶವ ಪತ್ತೆಃ ಕೊಲೆ ಶಂಕೆ ಪ್ರಕರಣ ದಾಖಲು
ಶ್ವಾನದಳದಿಂದ ಪರಿಶೀಲನೆ ಆರೋಪಿಗಳ ಪತ್ತೆಗೆ ಕ್ರಮ
yadgiri, ಶಹಾಪುರಃ ಅಪರಿಚಿತ ಯುವಕನೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ತಾಲೂಕಿನ ರಸ್ತಾಪುರ ಕ್ರಾಸ್ ಹತ್ತಿರ ಜಮೀನೊಂದರಲ್ಲಿ ನಡೆದಿದೆ. ಯುವಕ ಸುಮಾರು 32 ವರ್ಷದವನಾಗಿದ್ದು, ಕೆಂಪು ಶರ್ಟ್ ಮತ್ತು ಬ್ಲೂ ಜೀನ್ಸ್ ಪ್ಯಾಂಟ್ ತೊಟ್ಟಿರುತ್ತಾನೆ. ಶವ ಗುರುತಿಸಲ್ಪಡುವವರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ.
ಶವದ ಬಳಿ ಬೀರು, ಐಬಿ ಡ್ರಿಂಕ್ಸ್ ಬಾಟಲಿಗಳು ದೊರೆತಿವೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳವು ಘಟನಾ ಸ್ಥಳದಲ್ಲಿ ಪರಿಶೀಲಿಸಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ಮಂಜುನಾಥ ಭೇಟಿ ನೀಡಿ ಪಿಐ ಶ್ರೀನಿವಾಸ್ ಅಲ್ಲಾಪುರೆ ಅವರಿಂದ ಸಮರ್ಪಕ ಮಾಹಿತಿ ಪಡೆದುಕೊಂಡು, ಘಟನೆ ಕುರಿತು ತೀವ್ರ ತನಿಖೆಗೆ ಸೂಚಿಸಿದರು.
—————