ಸಿ.ಟಿ.ರವಿ @ 55 ಸಂಕಲ್ಪ – ಗುರು ವಂದನೆ ಕಾರ್ಯಕ್ರಮ
ಸಿ.ಟಿ.ರವಿ ಜನ್ಮ ದಿನಃ ಗುರು ವಂದನೆ ಕಾರ್ಯಕ್ರಮ
ಸಿ.ಟಿ.ರವಿ @ 55 – ಗುರು ವಂದನೆ ಕಾರ್ಯಕ್ರಮ
ಸಿ.ಟಿ.ರವಿ ಸಂಕಲ್ಪ ಗುರು ವಂದನೆ ಕಾರ್ಯಕ್ರಮ
yadgiri, ಶಹಾಪುರಃ ಸಿ.ಟಿ.ರವಿ ಸಂಕಲ್ಪದಂತೆ ಅವರ 55 ನೇ ಜನ್ಮ ದಿನಾಚರಣೆಯನ್ನು ಗುರು ಪೌರ್ಣಿಮೆಯಿಂದ ಐದು ದಿನಗಳ ವರೆಗೆ ರಾಜ್ಯದ ವಿವಿಧ ಮಠಾಧೀಶರಿಂದ ಆಶೀರ್ವಾದ ಮತ್ತು ಅವರ ಜನ್ಮ ದಿನ ಸೋಮವಾರ ನಿವೃತ್ತ ಶಿಕ್ಷಕರಿಗೆ ಗೌರವಿಸಿ ಅವರಿಂದಲೂ ಆಶೀರ್ವಾದ ಪಡೆಯುವ ಮೂಲಕ ವಿಶಿಷ್ಟವಾಗಿ ಜನ್ಮ ದಿನಾಚರಣೆಯನ್ನು ಗುರು ಪರಂಪರೆ ಸ್ಮರಿಸುವಂತೆ ಆಚರಿಸುತ್ತಿರುವ ಅವರ ಅಭಿಮಾನ ಬಳಗದ ಕಾರ್ಯ ಶ್ಲಾಘನೀಯ ನಮಗೆಲ್ಲ ಸಂತಸ ತಂದಿದೆ ಎಂದು ನಿವೃತ್ತ ಉಪನ್ಯಾಸಕ ಎಂ.ಎಂ.ಹುಂಡೇಕಾರ ತಿಳಿಸಿದರು.
ನಗರದ ಚರಬಸವೇಶ್ವರ ಗದ್ದುಗೆಯ ಸಂಗೀತ ಪಾಠ ಶಾಲೆಯ ಆವರಣದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ನೇತೃತ್ವದಲ್ಲಿ ನಡೆದ ಸಿಟಿ ರವಿ ಸಂಕಲ್ಪ ಗುರು ವಂದನೆ ಕಾರ್ಯಕ್ರಮದಲ್ಲಿ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಿ.ಟಿ.ರವಿ ಅವರೊಬ್ಬ ಪ್ರಬುದ್ಧ ರಾಜಕಾರಣಿ, ಹುಟ್ಟು ಹೋರಾಟಗಾರರು, ದೇಶಪ್ರೇಮಿ ಸದಾ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡ ಅವರ ಸೇವೆ ಬರಿ ರಾಜ್ಯಕ್ಕಷ್ಟೆ ಅಲ್ಲ ಇಡಿ ದೇಶಕ್ಕೆ ಅಗತ್ಯವಿದೆ. ಅವರ ಜನ್ಮ ದಿನ ಸಂಕಲ್ಪ ಗುರುಗಳಿಗೆ ವಂದನೆ ಸಲ್ಲಿಸಿ ಎಂಬ ಅವರ ವಿಚಾರ, ಚಿಂತನೆ ನಮ್ಮ ರಾಷ್ಟ್ರೀಯ ಸಂಸ್ಕøತಿ ಗುರು ಪರಂಪರೆಯನ್ನು ನೆನಪಿಸಿದೆ. ಆ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು, ಅವರ ಅಭಿಮಾನಿಗಳು ಮತ್ತು ನನ್ನ ಶಿಷ್ಯಂದಿರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಖುಷಿ ತಂದಿದೆ. ಮುಂದಿನ ಸಿ.ಟಿ.ರವಿ ಅವರ ಭವಿಷ್ಯದೊಂದಿಗೆ ನನ್ನ ಶಿಷ್ಯಂದಿರೆಲ್ಲರ ಭವಿಷ್ಯವು ಉಜ್ವಲವಾಗಿರಲಿ ಎಂದು ಹರಸಿದರು.
ಹಿರಿಯ ನಿವೃತ್ತ ಶಿಕ್ಷಕರಾದ ಸಯ್ಯದ್ ಚಾಂದ ಸಾಬ, ಬಸವರಾಜ ಬಸವಂತಪುರ ಗೌರವ ಸ್ವೀಕರಿಸಿ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಗುರುಬಸಯ್ಯ ಗದ್ದುಗೆ, ಮಲ್ಲರಡ್ಡೆಪ್ಪ ಮಾಸ್ಟರ್, ಸಿದ್ದಪ್ಪ ಮಾಸ್ಟರ್ ಕನ್ಯಾಕೋಳೂರ, ಸಿದ್ದಣ ಮಾನಸುಣಗಿ, ರವಿ ಮಾಸ್ಟರ್ ಗುತ್ತಿಪೇಠ, ರೇಖು ಚವ್ಹಾಣ, ಶರಣಪ್ಪ ಮಡ್ನಾಳ, ಬಿ.ರಾಜುಲು, ರಾಜಶೇಖರ ಇವರನ್ನು ಪ್ರೀತಿಯಿಂದ ಸನ್ಮಾನಿಸಿ ಭಗವದ್ಗೀತೆ ಗ್ರಂಥ ನೀಡಿ ಗೌರವಿಸಲಾಯಿತು.
ಬಿಜೆಪಿ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸಿ.ಟಿ.ರವಿ ಅವರೊಬ್ಬರು ಪ್ರಬುದ್ಧ ರಾಜಕಾರಣಿಯಾಗಿದ್ದು, ಅವರ 55 ನೇ ಜನ್ಮ ದಿನವನ್ನು ಅವರ ಸಂಕಲ್ಪದಂತೆ ಗುರು ಪೌರ್ಣಿಮೆಯಿಂದ ಐದು ದಿನಗಳ ಕಾಲ ಅವರ ಅಭಿಮಾನಿ ಬಳಗ, ಮತ್ತು ಬಿಜೆಪಿ ಕಾರ್ಯಕರ್ತರು ಭಾರತೀಯ ಸಂಸ್ಕೃತಿಯ ಗುರು ಪರಂಪರೆ ಸ್ಮರಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಮಠಾಧೀಶರನ್ನು ಗೌರವಿಸಿ ಅವರಿಂದ ಆಶೀರ್ವಾದ ಪಡೆಯುವ ಮೂಲಕ ಮತ್ತು ಜು.18 ರಂದು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಆಶೀರ್ವಾದ, ಮಾರ್ಗದರ್ಶನವನ್ನು ಪಡೆಯುವ ಮೂಲಕ ಗುರು ಪರಂಪರೆ ನೆನಪಿಸುವ ಕಾರ್ಯ ಮಾಡಿದ್ದೇವೆ. ಇದೊಂದು ಪ್ರೇರಣದಾಯಕ ಸರಳ ಕಾರ್ಯಕ್ರಮ.
-ಗುರು ಕಾಮಾ. ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ.
ಈ ಸಂದರ್ಭದಲ್ಲಿ ನಗರಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಜಿಲ್ಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಮಲ್ಲಿಕಾರ್ಜುನ ಕಂದಕೂರ, ಮರೆಪ್ಪ ಪ್ಯಾಟಿ, ಶೇಖರ ದೊರಿ, ದೇವಿಂದ್ರಪ್ಪ ಕೋನೇರ, ಬಸವರಾಜ ಬಿರಾಳ, ಮಲ್ಲಿಕಾರ್ಜುನ ಬುಕಿಸ್ಟಗಾರ, ರಾಜೂ ಪತ್ತಾರ, ಅಮೃತ ಹೂಗಾರ, ಶಕೀಲ್ ಮುಲ್ಲಾ, ನಗರಸಭೆ ಸದಸ್ಯರಾದ ಸತೀಶ ಪಂಚಭಾವಿ, ಅಶೋಕ ನಾಯಕ, ಅಮರೇಶ ನಂದಿಕೋಲ, ಅಪ್ಪಣ್ಣ ದಶವಂತ ಸೇರಿದಂತೆ ಸುಭಾಶ ತಳವಾರ, ಮಲ್ಲಿನಾಥ ಬಡಿಗೇರ, ಯಲ್ಲಪ್ಪ ಕಾಶಿರಾಜ, ಮಲ್ಲು ಉಳ್ಳಿ ಇತರರಿದ್ದರು.