Home
ಕಾಂಗ್ರೆಸ್ಸಿನವರ ಮೈಯಲ್ಲಿ ಜಿನ್ನಾ ಭೂತ ಹೊಕ್ಕಿದೆ – ಸಿ.ಟಿ.ರವಿ
ಕಾಂಗ್ರೆಸ್ಸಿನವರ ಮೈಯಲ್ಲಿ ಜಿನ್ನಾ ಭೂತ ಹೊಕ್ಕಿದೆ – ಸಿ.ಟಿ.ರವಿ
ಗೋವಾಃ ಕಾಂಗ್ರೆಸ್ ನ ವಿಪಕ್ಷ ನಾಯಕ ಸಿದ್ರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರ ಮೈಯಲ್ಲಿ ಜಿನ್ನಾ ಭೂತ ಹೊಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಸದ್ಯ ಗೋವಾ ವಿಧಾನಸಭೆ ಚುನಾವಣೆ ಹಿನ್ನೆಲೆ ಉಸ್ತುವಾರಿ ವಹಿಸಿದ್ದ ಅವರು, ಹಿಜಾಬ್ ಕುರಿತು ಹೇಳಿಕೆ ನೀಡಿ, ಶಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮಾನತೆಗಾಗಿ ಸಮವಸ್ತ್ರ ವಿತರಿಸಲಾಗುತ್ತದೆ. ಸೌದಿ ಮತ್ತು ಪಾಕಿಸ್ತಾನ ದಲ್ಲಿ ಹಿಜಾಬ್ ಕಡ್ಡಾಯವಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಲಿ.
ಭಾರತ ಮೂಲಭೂತವಾದಿ ರಾಷ್ಟ್ರವಲ್ಲ. ಜಿನ್ನಾ ಭಾರತ ಬಿಟ್ಟು ಹೋಗಿಯಾಗಿದೆ ಈಗ. ಕಾಂಗ್ರೆಸ್ಸಿಗರ ಮೈಗೆ ಜಿನ್ನಾ ಭೂತ ಹೊಕ್ಕಿದೆ ಆ ಕಾರಣ ಈ ರೀತಿ ರಾಜಕೀಯ ಮಾತನಾಡುತ್ತಾರೆ ಎಂದು ಅವರು ಟೀಕಿಸಿದರು.