ಕಾಂಗ್ರೆಸ್ ಅಧ್ಯಕ್ಷರಿಗೆ ಗೂಂಡಾಗಿರಿಯೇ ಮೆರೀಟ್ – ಸಿಟಿ ರವಿ ವಾಗ್ದಾಳಿ

ಕಾಂಗ್ರೆಸ್ ಅಧ್ಯಕ್ಷರಿಗೆ ಗೂಂಡಾಗಿರಿಯೇ ಮೆರೀಟ್ – ಸಿಟಿ ರವಿ ವಾಗ್ದಾಳಿ
ಬೆಂಗಳೂರಃ ಕಾಂಗ್ರೆಸ್ ಅಧ್ಯಕ್ಷರಿಗೆ ಗೂಂಡಾಗಿರಿಯೇ ಒಂದು ಮೆರೀಟ್ ಅನ್ಕೊಂಡಿದ್ದಾರೆ ಎಂದು ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಡಿಕೆಶಿ ವಿರುದ್ಧ ಹರಿಹಾಯ್ದರು.
ಮೊನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಅಶ್ವಥ್ ನಾರಾಯಣ ಮೈಕ್ ನಲ್ಲಿ ಮಾತನಾಡುವಾಗ ಡಿಕೆಶಿ ಸಹೋದರ ಕಿರಿಕ್ ಮಾಡಿರುವದನ್ನು ಕುರಿತು ಈ ಮೇಲಿನಂತೆ ಮಾಧ್ಯಮದ ಮುಂದೆ ವಾಗ್ದಾಳಿ ನಡೆಸಿದ ಅವರು,
ಹಳೇ ಮೈಸೂರ ಭಾಗದಲ್ಲಿ “ಗಂಡು” ಅನ್ನೋದು ಸಾಮಾನ್ಯವಾದದು, ಆ ಭಾಗದ ನೆಲದ ಸೊಗಡಿನ ಭಾಷೆಯಾಗಿದೆ. ಅದೆ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ತಮಗೆಲ್ಲ ಗೊತ್ತಿರುವಂತೆ ಆ ನೆಲದ ಸೊಗಡಿನ ಭಾಷೆ ಇದೇ ಹಾಗಂತ ಪದೇ ಪದೇ ತಪ್ಪು ತಿಳಿದು ತೋಳೇರಿಸಿ ಹೋಗುದಾ.?
ಎರಡು ಮೂರು ಜನ ಸಂಘ ಕಟ್ಕೊಂಡು ಬಂದು ಏನೇನು ಕೇಳೋದು ಅಂದು “ಗಂಡು” ಅಲ್ಲ ಎಂದಿದ್ದಕ್ಕೆ ಡಿಕೆ ಸುರೇಶ ಏನಪ್ಪದು ಯಾರದು ಗಂಡು ಅಲ್ಲ ಅಂತಿದಿಯಲ್ಲ ಅಂತ ಕಿರಿಕ್ ಶುರು ಮಾಡಿರುವದು ಲಕ್ಷವಲ್ಲ.
ಅದೊಂದು ವೇದಿಕೆ ಇತ್ತು. ಅಭಿವೃದ್ಧಿ ಕುರಿತು ಮಾತನಾಡುತ್ತಿದ್ದರು ಅಶ್ವಥ್ ನಾರಾಯಣ ಅವರು, ಅದೆ ವೇದಿಕೆಯಲ್ಲಿ ತಮಗೂ ಆ ಕುರಿತು ಮಾತನಾಡುವ ಅವಕಾಶವಿತ್ತು, ಅದು ಬಿಟ್ಟು ಗುಂಡಾಗರ್ದಿ ಮಾಡೋದು ಅಷ್ಟಕ್ಕೆ ತೋಳೇರಿಸುವದು ಸರಿಯಲ್ಲ. ಡಿಕೆಶಿ ಸಹೋದರರಿಗೆ ಗುಂಡಾಗಿರಿ ಅನ್ನೋದೇ ಮೆರಿಟ್ ಆಗಿದೆ ಎಂದು ಮತ್ತೊಮ್ಮೆ ಸ್ಪಷ್ಟವಾಗಿ ದೂರಿದರು.