ಮಿಠಾಯಿ ಮಾರುವವನ ಪ್ರೇಮ ಕಥೆ ಆಧಾರಿತ ‘ಸೈಕಲ್ ಸವಾರಿ’ ಜವಾರಿ ಮಂದಿ ಸಿನಿಮಾ
ಸೈಕಲ್ ಸವಾರಿ’ ಚಿತ್ರದ ಟ್ರೈಲರ್ ಬಿಡುಗಡೆ
‘ಸೈಕಲ್ ಸವಾರಿ’ ಚಿತ್ರದ ಟ್ರೈಲರ್ ಬಿಡುಗಡೆ
ಮಿಠಾಯಿ ಮಾರುವವನ ಪ್ರೇಮ ಕಥೆ ಆಧಾರಿತ ಜವಾರಿ ಮಂದಿ ಸಿನಿಮಾ
ಲವ್ ಸ್ಟೋರಿ, ಥ್ರಿಲ್, ಸಸ್ಪೆನ್ಸ್, ಫೈಟ್ ಮಿಶ್ರಿತ ಮಸ್ತ್ ಮಾಸ್ ಫಿಲ್ಮಂ
yadgiri, ಶಹಾಪುರಃ ಗ್ರಾಮದ ಹೊರ ವಲಯದಲ್ಲಿ ಜೋಪಡಿಯಲ್ಲಿ ವಾಸಿಸುವ ಯುವಕನೋರ್ವ ಆ ಹಳ್ಳಿಯಲ್ಲಿ ಸೈಕಲ್ ಮೇಲೆ ಮಿಠಾಯಿ ಮಾರುವ ಮೂಲಕ ಬದುಕು ಸಾಗಿಸುತ್ತಿರುವಾಗ ಅದೇ ಹಳ್ಳಿಯ ಮಿಠಾಯಿ ಖರೀದಿಸುತ್ತಿದ್ದ ಶ್ರೀಮಂತ ಮನೆತನದ ಯುವತಿಯೊಂದಿಗೆ ಆರಂಭವಾದ ಲವ್ ಸ್ಟೋರಿ ಮುಂದೆ ಏನಾಗಬಹುದು ಎಂಬುವ ಅಪ್ಪಟ ಉಕ ಭಾಗದ ಜವಾರಿ ಹುಡುಗನೊಬ್ಬನ ಪ್ರೇಮ ಕಥೆ ಎಣೆದಿದ್ದು, ಚಿತ್ರ ನೋಡಿದಾಗಲೇ ಸಸ್ಪೆನ್ಸ್, ಥ್ರಿಲ್ ಏನೆಂಬುದು ಗೊತ್ತಾಗಲಿದೆ ಎಂದು ಚಿತ್ರ ನಿರ್ದೇಶಕ, ನಟ ದೇವು ಅಂಬಿಗ ತಿಳಿಸಿದರು.
ನಗರದ ಕಸಾಪ ಭವನದಲ್ಲಿ ಸೈಕಲ್ ಸವಾರಿ ಚಲನ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರದ ಕಥೆ ಕುರಿತು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದ ಕಲಾವಿದರು ಸೇರಿಕೊಂಡು ಹಗಲು ರಾತ್ರಿ ಶ್ರಮವಹಿಸಿ ಚಿತ್ರ ಮಾಡಿದ್ದೇವೆ ತಮ್ಮೆಲ್ಲರ ಆಶೀರ್ವಾದ, ಪ್ರೀತಿ ಅಗತ್ಯವಿದ್ದು, ಪ್ರತಿಯೊಬ್ಬರು ಕುಟುಂಬ ಸಮೇತ ಚಿತ್ರ ನೋಡಿ ಹಾರೈಸಬೇಕೆಂದು ಮನವಿ ಮಾಡಿದರು.
ಕಸಾಪ ಅಧ್ಯಕ್ಷ ರವೀಂದ್ರನಾಥ ಹೊಸಮನಿ ಮಾತನಾಡಿ, ಟ್ರೈಲರ್ ನೋಡಿದಾಗಲೇ ಚಿತ್ರದಲ್ಲಿ ಹೊಸ ಸಂಚಲನವಿದೆ ಎಂಬುದು ಅರಿವಿಗೆ ಬರಲಿದೆ. ಪ್ರೇಕ್ಷಕರು, ನಮ್ಮ ಭಾಗದ ಕಲಾವಿದರಿಗೆ ಪ್ರೋತ್ಸಾಹಬೇಕಿದೆ.
ಶಹಾಪುರ ತಾಲೂಕಿನ ಸಿಂಗನಳ್ಳಿ ಗ್ರಾಮದ ಸುಕ್ಷೇತ್ರ ಯಲ್ಲಮ್ಮ ದೇವಿ ಜಾತ್ರೆಯಲ್ಲಿಯೂ ಶೂಟಿಂಗ್ ಮಾಡಿದ್ದು, ಸ್ಥಳೀಯ ಕಲಾವಿದರು ಅದರಲ್ಲಿ ಭಾಗವಹಿಸಿದ್ದು, ಮೂರ್ನಾಲ್ಕು ಚಿತ್ರಗಳು ಸ್ಥಳೀಯ ಕಲಾವಿದರಿಂದಲೇ ನೆರವೇರಿದ್ದು, ಈ ಚಿತ್ರವೂ ನಮ್ಮ ಭಾಗದ ಕಲಾವಿದರೇ ಸೇರಿಕೊಂಡು ಮಾಡಿದ್ದು, ಎಲ್ಲರೂ ಚಿತ್ರ ನೋಡುವ ಮೂಲಕ ಪ್ರೋತ್ಸಾಹಿಸಬೇಕೆಂದರು.
ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ, ಚಿತ್ರದÀ ಖಳನಾಯಕ ಶಿವಾಜಿ ಮೆಟಗಾರ ಮಾತನಾಡಿದರು. ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಅಯ್ಯನಗೌಡ ಸಿಂಗನಳ್ಳಿ, ನಿಂಗಣ್ಣ ಹವಲ್ದಾರ, ನಟಿ ದೀಕ್ಷಾ, ಸಹಾಯಕ ನಿರ್ದೇಶಕರಾದ ಸಚಿನ್ ಮತ್ತು ನವೀನ್ ಉಪಸ್ಥಿತರಿದ್ದರು. ಉಪನ್ಯಾಸಕಿ ಹಣಮಂತಿ ಗುತ್ತೇದಾರ ಸ್ವಾಗತಿಸಿದರು. ಕಾವೇರಿ ಪಾಟೀಲ್ ನಿರೂಪಿಸಿದರು. ಗೌಡಪ್ಪಗೌಡ ಹುಲಕಲ್ ವಂದಿಸಿದರು.
ಸೈಕಲ್ ಸವಾರಿ ಚಿತ್ರದ ಶೂಟಿಂಗ್ ವೇಳೆ ನಾನು ನಿರ್ದೇಶಕ, ನಟ ಸೇರಿದಂತೆ ಎಲ್ಲರೊಂದಿಗೆ ಓರ್ವ ಕುಟುಂಬದ ಸದಸ್ಯರಂತೆ ಭಾಗಿಯಾಗಿದ್ದೆ, ಆ ರೀತಿ ಭಾವನೆ ಶೂಟಿಂಗ್ ತಂಡದಲ್ಲಿ ಇತ್ತು. ಎಲ್ಲರೂ ಒಂದೇ ಕುಟುಂಬದಂತೆ ಕೆಲಸ ಮಾಡಿದ್ದೇವೆ. ಆದರೆ ಮೊನ್ನೆ ಮೊನ್ನೆ ತುಳು ಚಿತ್ರವೊಂದರಲ್ಲಿ ನಟಿಸಿದ ನನಗೆ ಶೂಟಿಂಗ್ ವೇಳೆ ಮಾತ್ರ ಮಾತು ಕಥೆ ಶೂಟಿಂಗ್ ಮುಗಿದ ತಕ್ಷಣ ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಇರಬೇಕಾದ ಸ್ಥಿತಿ ಇತ್ತು. ಸ್ಥಳೀಯರಾದ ನಾವುಗಳು ತುಂಬಾ ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಬೇಕು.
-ದೀಕ್ಷಾ. ನಟಿ.
ಚಲನಚಿತ್ರ ಎಂದಾಕ್ಷಣ ಎಲ್ಲರೂ ದೃಷ್ಟಿ ಬೆಂಗಳೂರ, ಮೈಸೂರ ಅಥವಾ ಮಂಗಳೂರ ಭಾಗದ ನಟ, ನಟಿಯರು ಎಂಬ ಭಾವನೆ ಮೂಡಿದೆ. ಅವರಿಗಿಂತ ಅದ್ಭುತ ಪ್ರತಿಭಾವಂತ ನಮ್ಮಲ್ಲಿದ್ದಾರೆ. ಆದರೆ ಅವರಿಗೆ ಆರ್ಥಿಕವಾಗಿ ಮತ್ತು ಉತ್ತಮ ಅವಕಾಶಗಳು ಇಲ್ಲ. ನಾಗರಿಕರ ಪ್ರೋತ್ಸಾಹವು ಇಲ್ಲ. ಹೀಗಾಗಿ ಪ್ರತಿಭೆಗಳು ಹೊರ ಬರುತ್ತಿಲ್ಲ. ಈಗಲಾದರೂ ಉಕ ಭಾಗದ ಕಲಾವಿದರಿಗೆ ಜನರು ಪ್ರೋತ್ಸಾಹಿಸಿದ್ದಲ್ಲಿ ಖಂಡಿತವಾಗಿ ಯಶಸ್ವಿಯಾಗಲಿದ್ದೇವೆ. ನಮ್ಮ ನಟ, ನಿರ್ದೇಶಕ ಸೇರಿದಂತೆ ಎಲ್ಲವೂ ದೇವು ಅಂಬಿಗ ಸರ್ ಅವರೇ ಮಾಡಿದ್ದಾರೆ. ಹತ್ತು ಜನರು ಮಾಡುವ ಕೆಲಸ ಅವರೊಬ್ಬರೇ ಮಾಡಿದ್ದಾರೆ ಅಂತಹ ಅದ್ಭುತ ಪ್ರತಿಭೆ ಅವರಲ್ಲಿದೆ. ಖಂಡಿತ ಪ್ರೋತ್ಸಾಹಿಸಿದ್ದಲ್ಲಿ ತೆಲುಗು, ತಮಿಳುನಾಡು ಚಲನಚಿತ್ರಕ್ಕೂ ಮೀರಿ ನಿರ್ದೇಶನ, ಕಥೆ ಎಣಿದು ಚಿತ್ರ ನಿರ್ಮಿಸಿ ತೋರಿಸಬಹುದು.
– ಶಿವಾಜಿ ಮೆಟಗಾರ. ಖಳನಾಯಕ.