ಪ್ರಮುಖ ಸುದ್ದಿಬಸವಭಕ್ತಿ
ಅ.24 ಮುದನೂರಿನಲ್ಲಿ ವಿಚಾರ ಸಂಕಿರಣ, ವಿಶೇಷ ಪೂಜಾ ಕಾರ್ಯಕ್ರಮ
ಅ.24 ಮುದನೂರಿನಲ್ಲಿ ವಿಚಾರ ಸಂಕಿರಣ, ವಿಶೇಷ ಪೂಜಾ ಕಾರ್ಯಕ್ರಮ
ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಗ್ರಾಮದ ದೇವರ ದಾಸಿಮಯ್ಯನವರ ದೇವಸ್ಥಾನದಲ್ಲಿ ಇದೇ ಅಕ್ಟೋಬರ್ 24 ಮತ್ತು 25 ರಂದು ಶ್ರೀ ಮುದನೂರ ಮಹಾಸಂಸ್ಥಾನ ಮಠ ಟ್ರಸ್ಟ್ (ರಿ) ಹಾಗೂ ಗ್ರಾಮಸ್ಥರು ಮತ್ತು ನೇಕಾರ ಸಮುದಾಯಗಳ ವಿವಿಧ ಸಂಘ ಸಂಸ್ಥೆಗಳಿಂದ ವಿಶ್ವಮಾನ್ಯ ಆದ್ಯವಚನಕಾರ ಶ್ರೀದೇವರ ದಾಸಿಮಯ್ಯನವರ ವಿಚಾರ ಸಂಕಿರಣ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದೆ ಎಂದು ಶ್ರಿಮಠದ ಡಾ.ಈಶ್ವರಾನಂದ ಸ್ಚಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಇದೇ ಸಂದರ್ಭದಲ್ಲಿ 2021 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೈದ ಸಾಧಕರು, ಸೇವಕರು ಮತ್ತು ಪ್ರತಿಭಾವಂತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಸದ್ಭಕ್ತರು ಮತ್ತು ನೇಕಾರ ಸಮುದಾಯದ ಎಲ್ಲ ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.