ಶಾಸಕ ದರ್ಶನಾಪುರ 61 ನೇಯ ಜನ್ಮ ದಿನಾಚರಣೆ
yadgiri, ಶಹಾಪುರಃ ಮಾಜಿ ಮಂತ್ರಿ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಅವರ ತಂದೆ ಮಾಜಿ ಮತ್ರಿ ಬಾಪುಗೌಡ ದರ್ಶನಾಪುರಂತೆ ದಿಟ್ಟ ಹೆಜ್ಜೆಯನಿಟ್ಟು ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ಬಂದವರು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆ ಹೀಗಾಗಿ ಕ್ಷೇತ್ರದ ಜನರ ಮನದಾಳದಲ್ಲಿ ದರ್ಶನಾಪುರ ಕುಟುಂಬದ ಹೆಸರು ಅಜರಾಮರವಾಗಿ ಉಳಿಯಲಿದೆ ಎಂದು ಶಿವಶರಣಪ್ಪ ಶಿರೂರ ಅಭಿಮತ ವ್ಯಕ್ತಪಡಿಸಿದರು.
ನಗರದ ಚರಬಸವೇಶ್ವರ ಶಾಲಾ ಆವರಣದಲ್ಲಿ ಗುರುವಾರ ಶಾಸಕ ದರ್ಶನಾಪುರ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಸದಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಇವರು, ದೂರದೃಷ್ಟಿ ನಾಯಕರಾಗಿದ್ದಾರೆ. ನಗರ ಸೇರಿದಂತೆ ಗ್ರಾಮೀಣ ಭಾಗ ಅಭಿವೃದ್ಧಿ ಸಾಕಷ್ಟು ಒತ್ತು ನೀಡಿದ್ದಾರೆ. ಜನಪಯೋಗಿ ಕಾರ್ಯಗಳನ್ನು ಕೈಗೆತ್ತುಕೊಳ್ಳುವ ಇವರು, ಸ್ವತಃ ಇಂಜಿನೀಯರ್ ಆಗಿದ್ದರಿಂದ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳುತ್ತಾರೆ.
ಗುರುವಾರ 61 ನೇ ವಸಂತಕ್ಕೆ ಕಾಲಿಟ್ಟ ಅವರ ರಾಜಕೀಯ ಬದುಕು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಜನ ಸೇವೆ ಮಾಡುವ ಅವರ ಶಕ್ತಿ ದುಪ್ಪಟ್ಟಾಗಲಿ ಎಂದು ಆಶಿಸಿದರು. ಕ್ಷೇತ್ರ ಪಾಲಿಗೆ ಅವರ ಜನಸೇವಕ, ಯಾವುದೇ ತೊಂದರೆ, ಸಮಸ್ಯೆ ಇದ್ದರೂ ಅದನ್ನು ಪರಿಹರಿಸುವ ಗುಣ ಅವರ ಹತ್ತಿರವಿದ್ದು, ಸಾಕಷ್ಟು ಜನ ದರ್ಶನಾಪುರ ಹತ್ತಿರ ಹೋದ್ರೆ ಸಾಕು ನಿಮ್ಮ ಕೆಲಸ ಆಗುತ್ತೆ ಎಮಬ ನಂಬಿಕೆಯನ್ನು ಗಳಿಸಿಕೊಂಡು ಬಂದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸರ್ವಧರ್ಮದ ಸ್ವಾಮೀಜಿ, ಮುಲ್ಲಾ, ಫಾದರ್ ಸೇರಿದಂತೆ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ಪರಿಕ್ಷೆಗಾಗಿ ಪ್ಯಾಡ್‍ಗಳನ್ನು ವಿತರಿಸಲಾಯಿತು.
ಸಜ್ಜಾದೆ ನಸೀನ್ ಮಹ್ಮದ್ ಹುಸೇನಿ, ಚಂದಾಹುಸೇನಿ ದರ್ಗಾ ಮತ್ತು ಸಯ್ಯದ್ ಇಸ್ಮಾಯಿಲ್. ಫಾದರ್ ಕ್ಲೀವನ್ ಗೋಮ್ಸ್, ಚಿಗರಳ್ಳಿಯ ಸಿದ್ಧಬಸವ ಕಬೀರರು, ಕಾಳಹಸ್ತೇಂದ್ರ ಶ್ರೀ, ಚಟ್ನಳ್ಳಿಯ ವಿಶ್ವರಾಧ್ಯ ದೇವರು, ಸಾರಿಪುತ್ರ ಬಂತೋಜಿ ಅವರನ್ನು ಗೌರವಿಸಲಾಯಿತು. ಇದೇ ವೇಳೆ 61 ಶ್ರಮ ಜೀವಿಗಳಾದ ಕಾರ್ಮಿಕರಿಗೆ ಸತ್ಕರಿಸಲಾಯಿತು. ಮುಖಂಡರಾದ ಶರಣಪ್ಪ ಸಲಾದಪುರ, ಬಾಪುಗೌಡ ಎಸ್.ದರ್ಶನಾಪುರ, ಯುವ ಕಾಂಗ್ರೆಸ್ ಅಧ್ಯಕ್ಷ ಮೌನೇಶ ನಾಟೇಕಾರ, ಮಲ್ಲಯ್ಯ ಸ್ವಾಮಿ ಇಟಗಿ, ಶಿವನಗೌಡ ಕರಡಕಲ್, ಭೀಮರಾಯ ಜುನ್ನಾ, ಶರಣಗೌಡ ಕರದಳ್ಳಿ, ಅಜೀಮ್ ಜಮಾದಾರ, ಲಕ್ಷ್ಮಣ ಶೆಟ್ಟಿಕೇರಾ, ಶಾಂತು ಪಾಟೀಲ್, ಆದಮ್ ಪಟೇಲ್ ಇತರರಿದ್ದರು.