ಹಿಂಗುಲಾಂಬಿಕ ದೇವಾಸ್ಥಾನ ಜೀರ್ಣೋದ್ಧಾರಕ್ಕೆ 10 ಲಕ್ಷ – ದರ್ಶನಾಪುರ
ಹಿಂಗುಲಾಂಬಿಕಾ ಗಣೇಶನ ದರ್ಶನ ಪಡೆದ ದರ್ಶನಾಪುರ

ಹಿಂಗುಲಾಂಬಿಕ ದೇವಾಸ್ಥಾನ ಜೀರ್ಣೋದ್ಧಾರಕ್ಕೆ 10 ಲಕ್ಷ – ದರ್ಶನಾಪುರ
ಹಿಂಗುಲಾಂಬಿಕಾ ಗಣೇಶನ ದರ್ಶನ ಪಡೆದ ದರ್ಶನಾಪುರ
yadgiri, ಶಹಾಪುರಃ ನಗರದ ಹಿಂಗುಲಾಂಬಿಕ ದೇವಿ ದೇವಾಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಶ್ರೀದೇವಿ ಹಾಗೂ ಗಣೇಶೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾದ ಗಣೇಶನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಾಲಯದ ಸಮಿತಿ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ದರ್ಶನಾಪುರ, ಹಿಂಗುಲಾಂಬಿಕಾ ದೇವಾಸ್ಥಾನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂ.ಅನುದಾನ ಮಂಜೂರು ಮಾಡಿಸಿರುವದಾಗಿ ತಿಳಿಸಿದ ಅವರು, ದೇವಸ್ಥಾನಗಳ ಜೋರ್ಣೋದ್ಧಾರದಿಂದ ಭಕ್ತರಿಗೆ ಅನುಕೂಲವಾಗಲಿದೆ.
ದೇವಸ್ಥಾನದಲ್ಲಿ ಶುಭ ಕಾರ್ಯಕ್ರಮ ಆಯೋಜಿಸುವದಕ್ಕೆ ಮತ್ತು ಇತರೆ ಕಾರ್ಯಕ್ರಮಗಳು ಸೇರಿದಂತೆ ಆಧ್ಯಾತ್ಮಿಕ ಕಾರ್ಯಕ್ರಮಗಳ ನಡೆಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ದೇವಾಲದಯ ಕಮಿಟಿ ಕಾರ್ಯ ನಿರ್ವಹಿಸಬೇಕು.
ಬರುವ ಭಕ್ತರಿಗೆ ಅನುಕೂಲ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಪ್ರಸಾದ, ಪೂಜೆ ಇತರೆ ಧಾರ್ಮಿಕ ಕಾರ್ಯಗಳು ಸರಾಗ ನಡೆಯಲು ಅನುವು ಮಾಡಿಕೊಡುವದಾಗಿ ಭರವಸೆ ನೀಡಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಗರಿಕರು ಭಾಗಿಯಾಗುವದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಒತ್ತಡದ ಬದುಕಿನಲ್ಲಿ ಗುಡಿ ಗುಂಡಾರಗಳಿಗೆ ತೆರಳಿ ಶಾಂತ ಚಿತ್ತದಿಂದ ಧ್ಯಾನಿಸಿ ಬಂದಲ್ಲಿ ಮನಸ್ಸು ಹಗುರವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಗಣೇಶನಿಗೆ ದೀಪ ಬೆಳಗಿಸಿ, ಕಾಯಿ ಕರ್ಪೂರ ನೀಡಿ ಕೃತಾರ್ಥರಾದರು.
ಈ ಸಂದರ್ಭದಲ್ಲಿ ನಗರಪ್ರಾಧಿಕಾರ ಮಾಜಿ ಅಧ್ಯಕ್ಷ ಗುಂಡಪ್ಪ ತುಂಬಗಿ, ಹಿಂಗುಲಾಂಬಿಕ ದೇವಸ್ಥಾನದ ಪ್ರಮುಖರು ಉಪಸ್ಥಿತರಿದ್ದರು.