ಕನ್ನಡಿಗರೇನು ಬಳೆ ತೊಟ್ಕೊಂಡಿದ್ದೀವಾ.? ತಾಖತ್ ಇದ್ರೆ ಕಬ್ಜಾ ಮಾಡಲಿ – ದರ್ಶನಾಪುರ ಸವಾಲ್
ಕನ್ನಡಿಗರೇನು ಬಳೆ ತೊಟ್ಕೊಂಡಿದ್ದೀವಾ.? ತಾಖತ್ ಇದ್ರೆ ಕಬ್ಜಾ ಮಾಡಲಿ – ದರ್ಶನಾಪುರ ಸವಾಲ್
ವಿವಿ ಡೆಸ್ಕ್ಃ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಬೆಳಗಾವಿ ನಮ್ಮದು ಎಂದು ಹೇಳುವ ಮಹಾರಾಷ್ಟ್ರದವರ ಉದ್ಧಟತನಕ್ಕೆ ಎನ್ ಹೇಳಬೇಕು, ಅವರು ಬಂದು ಬೆಳಗಾವಿ ಕಬ್ಜಾ ಮಾಡ್ಕೋತಕ ನಾವೇನ್ ಸುಮ್ನಿರ್ತೀವಾ.? ಕನ್ನಡಗರೇನು ಬಳೆ ತೊಟ್ಕೊಂಡಿದ್ದೀವಾ.? ತಾಖತ್ ಇದ್ರೆ ಕಬ್ಜಾ ಮಾಡಲಿ ನೋಡುವ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಫುಲ್ ಖಡಕ್ ಎಚ್ಚರಿಕೆ ನೀಡಿದರು.
ಮಾಧ್ಯಮದವರು ಮಹಾರಾಷ್ಟ್ರ ದವರು ಬೆಳಗಾವಿ ಕುರಿತು ನೀಡಿರುವ ಹೇಳಿಕೆಗೆ ಕುರಿತು ಕೇಳಿದಾಗ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಸುಮ್ನೆ ರಾಜಕೀಯ ಹೇಳಿಕೆ ನೀಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಉದ್ದೇಶವಷ್ಟೇ. ಬೆಳಗಾವಿ ಕಬ್ಜಾ ಮಾಡಿಕೊಳ್ಳಲಾಗುತ್ತಾ ಅದೆಲ್ಲ ಸಾಧ್ಯ ಇರದ ಮಾತು ಎಂದುತ್ತರಿಸಿದರು.
ದರ್ಶನಾಪುರ ಅವರ ಖಡಕ್ ಹೇಳಿಕೆಯನ್ನು ಕನ್ನಡ ಸೇನೆಯ ಕಲ್ಬುರ್ಗಿ ವಿಭಾಗದ ಮುಖಂಡ ದೇವು ಭೀ.ಗುಡಿ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದು, ಅಲ್ಲದೆ ಶಾಸಕರ ಹೇಳಿಕೆಯಿಂದ ಕನ್ನಡ ಸೇವಕರಾದ ನಮಗೆಲ್ಲ ಶಕ್ತಿ ಬಂದಿದೆ ಇನ್ನಷ್ಟು ಸ್ಪೂರ್ತಿ ದೊರೆತಿದೆ. ಬೆಳಗಾವಿ ಎಂದಿಗೂ ಮಹಾರಾಷ್ಟ್ರಕ್ಕೆ ಸೇರಲು ಬಿಡುವದಿಲ್ಲ. ಕನ್ನಡಿಗರನ್ನು ಕೆರಳಿಸದಿರಿ ಇಲ್ಲವಾದರೆ ಪೂರ್ಣಾಹುತಿಯಾದೀರಿ ಜೋಕೆ ಎಂದು ಅವರು ಎಚ್ಚರಿಸಿದ್ದಾರೆ.
ಕನ್ನಡದ ನೆಲ, ಜಲ ಕನ್ನಡತನಕ್ಕೆ ಧಕ್ಕೆ ಬಂದರೆ ಎಲ್ಲಾ ಪಕ್ಷದ ನಾಯಕರು ಕನ್ನಡಪರ ಸಂಘಟನೆಗಳು ಎಲ್ಲರೂ ಒಕ್ಕೊರಲ ಧ್ವನಿಯಿಂದ ಎದ್ದೇಳುವದನ್ನು ಕಂಡು ಮಹಾರಾಷ್ಟ್ರದ ನಾಯಕರು ತಿಳಿದುಕೊಂಡು ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ ಎಂದು ಛೇಡಿಸಿದರು.