RT PCR ಲ್ಯಾಬ್ ಟೆಕ್ನಿಷಿಯನ್ ರೋಮೇಶ ಹೃದಯಾಘಾತದಿಂದ ನಿಧನ
RT PCR ಲ್ಯಾಬ್ ಟೆಕ್ನಿಷಿಯನ್ ಹೃದಯಾಘಾತದಿಂದ ನಿಧನ
ಕಲ್ಬುರ್ಗಿಃ ನಗರದ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜಿನ ಮೊಳೆಕ್ಯೂಲರ್ ಡೈಗ್ನೋಸ್ಟಿಕ್ ಮತ್ತು ಸೆಂಟ್ರರಲ್ ಲ್ಯಾಬ್ ನಲ್ಲಿ RT PCR ಲ್ಯಾಬ್ ಟೆಕ್ನಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೋಮೇಶ ಚರ್ಮಾ (38) ಹೃದಯಾಘಾತದಿಂದ ನಿಧನ ಹೊಂದಿದರೆಂದು ಮೂಲಗಳು ತಿಳಿಸಿವೆ.
ರೋಮೇಶ ಚರ್ಮಾ ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವಾರ ಗ್ರಾಮದವರಾಗಿದ್ದು, ಕಳೆದ 8-10 ವರ್ಷದಿಂದ ಲ್ಯಾಬ್ ಟೆಕ್ನಿಷನ್ ವೃತ್ತಿಯಲ್ಲಿದ್ದು, ಕಳೆದ ವರ್ಷದಿಂದ ಸೆಂಟ್ರಲ್ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕೆಲಸ ಮುಗಿಸಿಕೊಂಡು ಮನೆಗೆ ಹೋದಾಗ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷದಿಂದ RT PCR ಟೆಸ್ಟಿಂಗ್ ಕಾರ್ಯದಲ್ಲಿ ಅವಿರತ ಶ್ರಮವಹಿಸುತ್ತಿದ್ದರು ಎಂದು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಪರಮ ಕಮಲನಗರ ಕಂಬನಿ ಮಿಡಿದಿದ್ದಾರೆ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ರೋಮೇಶನ ಸ್ನೇಹಿತರು, ಆತ್ಮೀಯರು ಸಂತಾಪ ತಿಳಿಸಿದ್ದಾರೆ.