ಪ್ರಮುಖ ಸುದ್ದಿ

ದೇವರ ದಾಸಿಮಯ್ಯ ಜಾತ್ರಾ ಮಹೋತ್ಸವ ಯಶಸ್ಸಿಗೆ ಕರೆ

ದೇವರ ದಾಸಿಮಯ್ಯ ಜಾತ್ರಾ ಮಹೋತ್ಸವ ಯಶಸ್ಸಿಗೆ ಕರೆ

ಚಿಂತನ ಮಂಥನ,‌ ಚರ್ಚಾ ಸಭೆ

yadgiri, ಶಹಾಪುರಃ ಸುರಪುರ ತಾಲೂಕಿನ ಮುದನೂರ ಗ್ರಾಮ ದೇವರ ದಾಸಿಮಯ್ಯನವರ ಪುಣ್ಯ ಭೂಮಿ. ಆ ಪುಣ್ಯ ಭೂಮಿಯಲ್ಲಿ ಏಪ್ರೀಲ್ 17 ರಿಂದಿ 22 ರವೆಗೆ ನಡೆಯುವ ವಚನಕಾರ ದಾಸಿಮಯ್ಯನವರ ಜಾತ್ರಾ ಮಹೋತ್ಸವ ಹಾಗೂ ಇತರೆ ಕಾರ್ಯಕ್ರಮಗಳ ಯಶಸ್ಸಿಗೆ ಸರ್ವರೂ ತನುಮನಧನದಿಂದ ಸಹಕರಿಸಬೇಕೆಂದು ಮುದನೂರ ಸಂಸ್ಥಾನ ಮಠದ ರಚನಾ ಸಮಿತಿ ಮುಖ್ಯಸ್ಥ ರಾಮಸ್ವಾಮಿ ಕರೆ ನೀಡಿದರು.

ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ನೇಕಾರ ಸಮುದಾಯಗಳ ಚಿಂತನ ಮಂಥನ ಹಾಗೂ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಣೆ ಕುರಿತು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಲ್ಲದೆ ಅಂದು ನಡೆಯುವ ಕಾರ್ಯಕ್ರಮದಲ್ಲಿ ನೇಕಾರ ಸಮುದಾಯದ ಸ್ಥಳೀಯ ಸಂಸ್ಥೆಗಳ ಚುನಾಯಿತ ನೂತನ ಜನ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವು ಆಯೋಜಿಸಲಾಗಿದೆ. ನೇಯ್ಗೆ ಕೆಲಸ ಮಾಡುವ ಎಲ್ಲಾ ಸಮುದಾಯಗಳ ಒಗ್ಗಟ್ಟಾಗಿ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಯಾವುದೇ ಭೇದಭಾವ ಮಾಡದೆ ಸಂಘಟನಾತ್ಮಕವಾಗಿ ನಡೆಯಬೇಕು ಎಂದರು.

ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ಭಂಡಾರಿ ಮಾತನಾಡಿ, ರಾಜ್ಯದಲ್ಲಿರುವ ನೇಕಾರರು ಸರ್ಕಾರದ ಮುಂಗೈ ಹಿಡಿದು ಕೆಲಸ ಮಾಡಿಸುವಂತ ಗಟ್ಟಿತನ ಮೂಡಬೇಕಿದೆ. ಒಕ್ಕೂಟದ ಜವಬ್ದಾರಿ ಹೊತ್ತು ಸಮಗ್ರ ನೇಕಾರ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದ ಮಟ್ಟದಲ್ಲಿ ನೇಕಾರ ಸಮುದಾಯದ ನೋವು ನಲಿವಿಗೆ ಸ್ಪಂಧಿಸಲು ವಿಧಾನಸಭೆಯಲ್ಲಿ ಓರ್ವ ಜನಪ್ರತಿನಿಧಿ ಇಲ್ಲದಿರುವದು ನೋವಿನ ಸಂಗತಿಯಾಗಿದ್ದು, ಆ ಆಶಾವಾದದೊಂದಿಗೆ ಮುನ್ನಡೆಯೋಣ. ಅಲ್ಲದೆ ಸಮುದಾಯ ಮಠ, ಮಂದಿರ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವಲ್ಲಿ ಶ್ರಮಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ನೇಕಾರರ ಸಮುದಾಯದ ಮಹಿಳಾ ಮುಖ್ಯಸ್ಥೆ ಶೋಭಾ ಮುರಳಿ ಕೃಷ್ಣಾ, ರಾಚಮ್ಮ ಪಾಟೀಲ್ ಮಾತನಾಡಿದರು. ಮುಖಂಡರಾದ ಬಸವರಾಜ ಹುನಗುಂದ, ಶಹಾಪುರ ಸ್ವಕುಳ ಸಾಳಿ ಸಮಾಜ ಅಧ್ಯಕ್ಷ ರಾಜಕುಮಾರ ಚಿಲ್ಲಾಳ, ಸುರಪುರ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ವೀರಸಂಗಪ್ಪ ಹಾವೇರಿ, ಗುರಮಿಠಕಲ್ ಅಧ್ಯಕ್ಷ ಸುರೇಶ ಗುತ್ತಿ ಉಪಸ್ಥಿತರಿದ್ದರು. ಪ್ರವೀಣ ಫಿರಂಗಿ ಸ್ವಾಗತಿಸಿದರು. ಲಕ್ಷ್ಮೀ ಫಿರಂಗಿ ಮತ್ತು ಸುರೇಖಾ ಏಕಬೋಟೆ ನಿರೂಪಿಸಿದರು. ಅಂಬಿಕಾ ಮಾನು ಪ್ರಾರ್ಥಿಸಿ ವಂದಿಸಿದರು.

ಮೂಲ ನೇಕಾರಿಕೆ ಮಾಡುವ 30 ಕ್ಕೂ ಅಧೀಕ ಸಮಾಜಗಳನ್ನು ಗುರುತಿಸಿ ಒಂದೇ ವೇದಿಕೆಗೆ ಕರೆ ತರಲಾಗಿದ್ದು, ನಂತರ ಸರ್ಕಾರಕ್ಕೆ ಒತ್ತಾಯಿಸಿ ನೇಕಾರರ ಸಂತ ದೇವರ ದಾಸಿಮಯ್ಯ ಜಯಂತಿ ಆಚರಣೆಗೆ ತರಲಾಗಿದೆ. ಈ ಮೂಲಕ ಉಪ ಪಂಗಡಗಳೆಲ್ಲ ಒಂದಾಗಿ ನಾವೆಲ್ಲ ಒಂದೇ ಎಂಬ ಭಾವನೆಯೊಂದಿಗೆ ನೇಕಾರ ಸಮುದಾಯಗಳ ಒಕ್ಕೂಟ ಮುನ್ನಡೆಯಬೇಕು ಎಂದು ಮುದನೂರ ಸಂಸ್ಥಾನದ ಈಶ್ವರಾನಂದ ಸ್ವಾಮೀಜಿ ತಿಳಿಸಿದರು.

ನೇಕಾರ ಸಮುದಾಯಗಳ ಚಿಂತನ ಮಂಥನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಏಪ್ರಿಲ್ 17 ರಿಂದ 22 ರವರೆಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನೇಕಾರರ ಶಕ್ತಿ ಪ್ರದರ್ಶನ ತೋರಿಸಬೇಕಿದೆ. ಆ ನಿಟ್ಟಿನಲ್ಲಿ ಎಲ್ಲಾ ನೇಕಾರರು ಅಂದು ಒಗಟಗ್ಟು ಪ್ರದರ್ಶನ ಮಾಡಬೇಕು. ಮಹಿಳೆಯರು, ಯುವ ಸಮುದಾಯ ಸೇರಿದಂತೆ ಅಂದು ಸರ್ವರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಅಲ್ಲದೆ ನೇಕಾರರ ಮೂಲ ಪುರಷ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಸುಕ್ಷೇಕ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಒಕ್ಕೊರಲಿನ ಒತ್ತಾಯ ಅಗತ್ಯವಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button