ಪ್ರಮುಖ ಸುದ್ದಿ
BREAKING ಧರ್ಮಸ್ಥಳದ ವೀರೇಂದ್ರ ಹೆಗಡೆ ರಾಜ್ಯಸಭೆಗೆ ನೇಮಕ
ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ
ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ- ಟ್ವಿಟ್ ಮೂಲಕ ಶ್ರೀರಾಮುಲು ಸಂತಸ
ವೀರೇಂದ್ರ ಹೆಗಡೆ ರಾಜ್ಯಸಭೆಗೆ ನೇಮಕ
ವಿವಿ ಡೆಸ್ಕ್ಃ ರಾಜರ್ಷಿ ಪರಮಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರನ್ನು ರಾಜ್ಯಸಭೆ ಸದಸ್ಯರನ್ನಾಗಿ ನಾಮ ನಿರ್ದೇಶಿತರಾಗಿರುವದು ಸಂತಸ ತಂದಿದೆ ಎಂದು ಬಿಜೆಪಿಯ ಶ್ರೀರಾಮುಲು ಟ್ವಿಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ, ಆರೋಗ್ಯ, ಸ್ತ್ರೀಸಬಲೀಕರಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀಗಳ ಅನುಭವ ಮತ್ತು ಜ್ಞಾನ ರಾಜ್ಯಸಭೆಗೆ ವಿಶಿಷ್ಟ ಮೆರುಗು ನೀಡಲಿದೆ.
ಧರ್ಮಾಧಿಕಾರಿಗಳು ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಅವರ ಸಲಹೆ ಸರ್ಕಾರಕ್ಕೂ ಅಗತ್ಯವಿದೆ ಎಂದು ನಾಗರಿಕರ ಅಂಬೋಣವಾಗಿದೆ.