ನೀರಲ್ಲಿ ಹರಿದು ಹೊರಟಿದ್ದ ಇರುವೆಯನ್ನು ರಕ್ಷಿಸಿದ ಪಾರಿವಾಳ
ದಿನಕ್ಕೊಂದು ಕಥೆ
ಫಲಿಸಿದ ಸ್ನೇಹ
ಒಂದು ಕೊಳದ ನೀರಿಗೆ ಒಮ್ಮೆ ಇರುವೆಯೊಂದು ಬಿದ್ದಿತು. ತಕ್ಷಣವೇ ಮೇಲೆ ಕುಳಿತಿದ್ದ ಪಾರಿವಾಳವೊಂದು ಇದನ್ನು ಕಂಡು ಒಂದು ಎಲೆಯನ್ನು ಕಿತ್ತು ಕೆಳಗೆ ಹಾಕಿತು. ಇರುವೆ ಆ ಎಲೆಯ ಮೇಲೆ ಹತ್ತಿಕೊಂಡು ಬದುಕಿತು. ಪಾರಿವಾಳವೇ ಅದರ ಆಪ್ತ ಸ್ನೇಹಿತನಾಯಿತು.

ಒಂದು ದಿನ ಒಬ್ಬ ಬೇಟೆಗಾರ ಆ ಪಾರಿವಾಳಕ್ಕೆ ಬಾಣ ಬಿಡಬೇಕು ಎಂದು ತಯಾರಾಗಿದ್ದ. ಅದೇ ಸಮಯಕ್ಕೆ ಸರಿಯಾಗಿಯೇ ಮೇಲೆ ಒಂದು ಹದ್ದು ಈ ಪಾರಿವಾಳವನ್ನು ತಿನ್ನಬೇಕೆಂದು ಹೊಂಚು ಹಾಕುತ್ತಿತ್ತು. ಆಗ ಇರುವೆ ಇದನ್ನು ಗಮನಿಸಿತು. ತಕ್ಷಣವೇ ಬೇಟೆಗಾರನ ಕಾಲಿಗೆ ಕಚ್ಚಿ ಬಿಟ್ಟಿತು.
ಆಗ ಇವನು ಗುರಿ ಇಟ್ಟಿದ್ದ ಬಾಣ ನೇರವಾಗಿ ಹೋಗಿ ಹದ್ದಿಗೆ ಹೊಡೆದು ಹದ್ದು ಸತ್ತು ಬಿದ್ದಿತು. ಇವನು ಇರುವೆ ಕಚ್ಚಿತೆಂದು ಕಾಲನ್ನೆಳೆದುಕೊಂಡು ಬೇರೆ ಕಡೆ ದೊಪ್ಪೆಂದು ಇಟ್ಟುಬಿಟ್ಟ, ಅಲ್ಲಿ ಒಂದು ಹಾವಿನ ಹುತ್ತವಿತ್ತು. ಅದರಿಂದ ಒಂದು ಹಾವು ಹೊರಗೆ ಬಂತು . ಬುಸ್ ಎಂದು ಇವನನ್ನು ಕಚ್ಚಿಯೇ ಬಿಟ್ಟಿತು.
ಈ ಪಾರಿವಾಳ ಮಾತ್ರ ಎರಡೂ ಕಡೆಯಿಂದ ತಪ್ಪಿಸಿಕೊಂಡಿತು. ಇರುವೆಯಾದರೋ ಚಿಕ್ಕದಾದರೂ ಉಪಕಾರಕ್ಕೆ ಮರೆಯದೆ ಪ್ರತ್ಯುಪಕಾರವನ್ನು ಮಾಡಿ ಗೆದ್ದಿತು.
ನೀತಿ :– ಪರೋಪಕಾರವೆ ಪುಣ್ಯ. ಎಲ್ಲರಿಗೂ ಒಳಿತು ಮಾಡುವ ವಿಶಾಲವಾದ ಮನಸ್ಸಿರಬೇಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.