ಸೂಜಿ ಮತ್ತು ಕತ್ತರಿ ಎರಡು ಒಂದಡೆ ಇದ್ದರೂ ಅವುಗಳ ಕಾರ್ಯ ತದ್ವಿರುದ್ಧ
ದಿನಕ್ಕೊಂದು ಕಥೆ
ಬಟ್ಟೆ ಹೊಲಿಯುವವರ ಬಳಿ ಅತಿ ಮುಖ್ಯವಾದ ಎರಡು ಉಪಕರಣಗಳಿರಲೇಬೇಕು.
ಒಂದು ಸೂಜಿ, ಇನ್ನೊಂದು ಕತ್ತರಿ. ಇವೆರಡೂ ಜೊತೆಯಲ್ಲೇ ಇರುವುದಾದರೂ ಇವೆರಡರ ಸ್ವಭಾವ ಮಾತ್ರ ವಿರುದ್ಧ.
ಕತ್ತರಿ ಬಟ್ಟೆಯನ್ನು ಕತ್ತರಿಸಿ ತುಂಡು ತುಂಡು ಮಾಡುತ್ತದೆ. ಆದರೆ ಸೂಜಿ ಆ ತುಂಡುಗಳನ್ನು ಜೋಡಿಸಿ ಒಂದುಗೂಡಿಸುತ್ತದೆ.
ಕತ್ತರಿಗೆ ಹೋಲಿಸಿದರೆ ಸೂಜಿ ಅತಿ ಚಿಕ್ಕ ವಸ್ತು. ಸಾಮಾಜಿಕವಾಗಿ ಇದರಿಂದ ಒಂದು ನೀತಿ ಸಿಕ್ಕುತ್ತದೆ.
ಕೆಲವರು ಕತ್ತರಿಯಂತೆ ತಮಗೆ ಬೇಡವಾದುದನ್ನು ಕತ್ತರಿಸಿ ವಿಭಜಿಸುತ್ತಾರೆ.
ಅದು ಸಮಾಜವಾಗಬಹುದು. ಸಂಸ್ಥೆಯಾಗಬಹುದು. ಸಂಸಾರವೇ ಆಗಬಹುದು. ಸ್ನೇಹವೂ ಆಗಬಹುದು.
ಕತ್ತರಿಯ ಹರಿತಕ್ಕೆ ಒಳಗಾದವರು ದುಃಖಿಸುತ್ತಲೇ ಮತ್ತೆ ಮತ್ತೆ ತುಂಡಾಗುತ್ತಲೇ ಇರುತ್ತಾರೆ.
ಆದರೆ ಸೂಜಿ ಚಿಕ್ಕದಾದರೂ ಕೆಲಸ ನಿಧಾನವಾದರೂ ತುಂಡಾದುದನ್ನು ಹೊಲಿದು ಜೋಡಿಸುವಂತೆ, ಸಜ್ಜನರು ವಿಭಜಿತರನ್ನು ಒಂದುಗೂಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಆದುದರಿಂದ ನಾವು ಸೂಜಿಯಂತಾಗಬೇಕು. ಕತ್ತರಿಯಂತಾಗಬಾರದು.
ಇದೇ ಸಾಮಾಜಿಕ ನೀತಿ. ಇದನ್ನು ತಿಳಿದು ಬದುಕೋಣ. ಮನುಷ್ಯನದು ಸ್ವಂತದ್ದು ಏನಿದೆ? ಜನ್ಮ ಬೇರೆಯವರು ನೀಡಿದ್ದಾರೆ ..! ಹೆಸರು ಬೇರೆಯವರು ಇಟ್ಟಿದ್ದಾರೆ. ಶಿಕ್ಷಣ ಬೇರೆಯವರು ಕಲಿಸಿದ್ದಾರೆ. ಕೆಲಸವು ಬೇರೆಯವರು ಕೊಟ್ಟಿದ್ದಾರೆ.. ನಾಳೆ ಸ್ಮಶಾನಕ್ಕೆ ಬೇರೆಯವರೇ ಹೊತ್ತುಕೊಂಡು ಹೋಗುತ್ತಾರೆ..!
ಹಾಗಾದರೆ, ವ್ಯರ್ಥ ಅಹಂಕಾರ ಏಕೆ..? ಯಾವಾಗಲೂ ಒಳ್ಳೆಯ ಕರ್ಮದ ಬಗ್ಗೆ ಯೋಚಿಸಬೇಕಲ್ಲವೇ…?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882