ಕಳ್ಳನ ಕೈಗೆಟುಕದ ವಜ್ರ ಈ ಕಥೆ ಓದಿ
ವಜ್ರದ ಸಂರಕ್ಷಣೆ
ವಜ್ರದ ವ್ಯಾಪಾರಿಗೆ ವಜ್ರ ಮಾರಾಟಮಾಡಲು ರೈಲಿನಲ್ಲಿ ಮೂರು ದಿನ ಪ್ರಯಾಣ ಮಾಡಬೇಕಾಯಿತು. ಒಬ್ಬ ಕಳ್ಳ ಕೂಡಾ ಇವನ ಜತೆಗೇನೇ ಸೇರಿಕೊಂಡು ಸಾಕಷ್ಟು ಶೋಧಿಸುತ್ತಿದ್ದ ವ್ಯಾಪಾರಿ ಮಲಗಿದ ಮೇಲೆ ಕಳ್ಳನು ದಿನಂಪ್ರತಿ ಅವನ ಹಾಸಿಗೆ, ಜೇಬುಗಳನ್ನೆಲ್ಲ ಬಿಡದ ಶೋಧಿಸುತ್ತಿದ್ದ. ಆದರೂ ವಜ್ರ ಮಾತ್ರ ಸಿಗಲಿಲ್ಲ.
ಬೆಳಿಗ್ಗೆ ಆದೊಡನೆ ಆ ವಜ್ರದ ವ್ಯಾಪಾರಿಯು ಥಳಥಳಿಸುವ ವಜ್ರವನ್ನು ಎಲ್ಲರಿಗೂ ತೋರಿಸುತ್ತಲೇ ಮೆರೆದಾಡುತ್ತಿದ್ದ. ಮೂರು ರಾತ್ರಿಯೂ ಕಳೆದ ನಂತರ ಈ ಕಳ್ಳನೇ ಬಾಯ್ಲಿಟ್ಟು ಕೇಳಿದ ಸ್ವಾಮೀ, ನಿಮ್ಮ ಬಳಿ ಇರುವ ವಜ್ರ ಕದಿಯಲು ಬಹಳ ಶ್ರಮಪಟ್ಟೆ, ಆದರೆ ನೀವು ಆದಲ್ಲಿ ಅವಿತಿರಿಸಿಕೊಂಡಿದ್ದೀರಿ ಆ ವಜ್ರವನ್ನು ?
ಆ ವ್ಯಾಪಾರಿಯು ಜೋರಾಗಿ ನಗುತ್ತಲೇ ಹೇಳಿದ ಅಯ್ಯೋ ಪೆದ್ದಾ. ನೀನು ನನ್ನನ್ನು ಹಿಂಬಾಲಿಸಿದಾಗಲೇ ನನಗೆ ನೀನು ಕಳ್ಳನೆಂಬ ಸಂಶಯ ಬಂದಿತ್ತು. ನಿನ್ನ ಬಟ್ಟೆಯ ಗಂಟಿನಲ್ಲೇ ನನ್ನ ವಜ್ರದ ಪೊಟ್ಟಣವನ್ನೂ ನಾನಿಟ್ಟು ನಿಶ್ಚಿಂತೆಯಿಂದಲೇ ಇದ್ದೆ ಎಂದನಾತ.
ಆ ಪ್ರಚಂಡ ಕಳ್ಳನಿಗೇ ವಜ್ರದ ವ್ಯಾಪಾರಿಯ ಜಾಣ್ಯ ತಿಳಿದಾಗ ಮಹದಾಶ್ಚರ್ಯವಾಯಿತು.
ನೀತಿ :– ಚುರುಕುಮತಿ ಹಾಗೂ ಧೈರ್ಯದಿಂದರೆ ವಜ್ರ ಸದೃಶವಾದ ಜೀವನ ರಕ್ಷಿಸಬಹುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.