ಭಿಕ್ಷುಕನಿಗೆ ತಕ್ಕ ಪಾಠ ಕಲಿಸಿದ ನಸ್ರುದ್ದೀನ್
ಭಿಕ್ಷುಕನ ಆಟದ ಬುದ್ಧಿಗೆ ಪಾಠ ಕಲಿಸಿದ ಮುಲ್ಲಾ
ಒಂದು ದಿನ ಭಿಕ್ಷುಕ ಮುಲ್ಲಾ ನಸ್ರುದ್ದೀನನ ಬಾಗಿಲು ತಟ್ಟಿದ. ಮುಲ್ಲಾ ಆ ಸಮಯದಲ್ಲಿ ಅವರ ಮನೆಯ ಮೇಲಿನ ಮಹಡಿಯಿಂದಲೇ ಕಿಟಕಿ ತೆರೆದು ಭಿಕ್ಷುಕನಿಗೆ “ನಿನಗೆ ಏನು ಬೇಕು?” ಎಂದು ಕೇಳಿದ. ಭಿಕ್ಷುಕ
“ನೀವು ಕೆಳಗೆ ಬಂದರೆ ಹೇಳುತ್ತೇನೆ” ಎಂದ.
ಆಗ ಮುಲ್ಲಾ ಕೆಳಗಿಳಿದು ಬಾಗಿಲು ತೆರೆದು “ಈಗ ನಿನಗೆ ಏನು ಬೇಕು ಹೇಳು” ಎಂದಾಗ, “ನನಗೆ ಒಂದು ನಾಣ್ಯವನ್ನು ಕೊಡು ಕರುಣಾಳು” ಎಂದು ಭಿಕ್ಷುಕನು ಬೇಡಿಕೊಂಡ.
ಮುಲ್ಲಾ ತುಂಬಾ ಸಿಟ್ಟಾಗಿ, ಮತ್ತೆ ಮನೆಯ ಮೇಲಕ್ಕೆ ಹೋಗಿ ಅದೇ ಕಿಟಕಿಯಿಂದ ಇಣುಕಿ ನೋಡಿ ಭಿಕ್ಷುಕನಿಗೆ “ಇಲ್ಲಿಗೆ ಬಾ” ಎಂದ.
ಭಿಕ್ಷುಕನು ಮೆಟ್ಟಿಲುಗಳ ಮೇಲೆ ಹೋಗಿ ಮುಲ್ಲಾನ ಮುಂದೆ ನಿಂತನು. ಆಗ ಮುಲ್ಲಾ “ಕ್ಷಮಿಸಿ ಸಹೋದರ, ನನ್ನ ಬಳಿ ಈಗ ಹಣವಿಲ್ಲ” ಎಂದ. ಆಗ ಭಿಕ್ಷುಕ “ನೀವು ಇದನ್ನು ಕೆಳಭಾಗದಲ್ಲಿ ನನಗೆ ಏಕೆ ಹೇಳಲಿಲ್ಲ? ನಾನು ಅನಗತ್ಯವಾಗಿ ಹಲವು ಮೆಟ್ಟಿಲುಗಳನ್ನು ಏರಬೇಕಾಯಿತು! ಎಂದು ಕೋಪದಿಂದ ಕೇಳಿದ.
ಆಗ ಮುಲ್ಲಾ “ನಿನಗೆ ನಾನು ಏನು ಬೇಕು ಎಂದು ಮೇಲಿನಿಂದ ಕೇಳಿದಾಗ !? ನೀನು ಏಕೆ ಹೇಳಲಿಲ್ಲ, ಎಂದಾಗ ಪೆಚ್ಚು ಮೋರೆ ಮಾಡಿಕೊಂಡು ಭಿಕ್ಷುಕ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿ ಹೋದ.
ನೀತಿ :– ಭಿಕ್ಷೆ ಕೊಡಲು ಕೈಯಿಂದ ಆಗದಿದ್ದರೆ ಮುಲ್ಲಾ ಮಾಡಿದ ಉಪಾಯ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.