ಕೆಸರಲ್ಲಿ ಸಿಲುಕಿದ ವೃದ್ಧ ಆನೆ ಹೊರಬರಲು ರಾಜ ಮಾಡಿದ ಪ್ಲಾನ್ ಏನು.?

ಆತ್ಮಶಕ್ತಿಯ ವೈಭವ
ಒಬ್ಬ ರಾಜನ ಬಳಿ ಬಲಿಷ್ಠ ಬೃಹತ್ ಆನೆಯಿತ್ತು. ಸ್ವಾಮಿ ಭಕ್ತ ಹಾಗೂ ದೈವ ಭಕ್ತ ಆ ಆನೆಯನ್ನಾತ ಬಹಳಷ್ಟು ಪ್ರೀತಿಸುತ್ತಿದ್ದ. ಶತ್ರುಗಳಿಗೆಲ್ಲ ಅದು ಸಿಂಹಸ್ವಪ್ನವಾಗಿತ್ತು. ಕ್ರಮೇಣ ಅದು ಮುದಿಯಾಯಿತು.
ಒಂದು ದಿನ ನೀರು ಕುಡಿಯಲು ಹತ್ತಿರದ ಕೆರೆಗೆ ಹೋಯಿತು. ಅಲ್ಲಿನ ಕೆಸರಿನಲ್ಲಿ ಸಿಕ್ಕಿಕೊಂಡಿತು. ವೃದ್ಧಾಪ್ಯದ ಕಾರಣದಿಂದಾಗಿ ಕೆಸರಿನಿಂದ ಬಿಡಿಸಿಕೊಂಡು ಹೊರಬರಲು ಅಸಾಧ್ಯವಾಗಿ ಘೀಳಿಡತೊಡಗಿತು.
ಮಾವುತನಿಗೆ ಆ ಸದ್ದು ಕೇಳಿಸಿ ಓಡೋಡಿ ಬಂದ. ಭರ್ಜಿಯಿಂದ ಆನೆಗೆ ಸಾಕಷ್ಟು ತಿವಿದ. ನೋವನ್ನು ಸಹಿಸಲಾರದೆ ಕೆಸರಿನಿಂದ ಮೇಲೆ ಬರುತ್ತದೆ ಎಂಬ ಆತನ ಯೋಚನೆ ವಿಫಲವಾಯಿತು. ಆನೆ ಇನ್ನಷ್ಟು ನೋವಿನಿಂದ ಕಂಗೆಟ್ಟು ಜೋರಾಗಿ ಘೀಳಿಡತೊಡಗಿತು.
ಸುದ್ದಿ ತಿಳಿದು ರಾಜ ಅಲ್ಲಿಗೆ ಬಂದ. ತಕ್ಷಣವೇ ಹೇಳಿದ ‘ಆನೆಯೆದುರು ಸೈನಿಕರು ಸಾಲಾಗಿ ನಿಲ್ಲಲಿ. ಯುದ್ಧ ಭೇರಿಯನ್ನು ಮೊಳಗಿಸಬೇಕು. ಕೂ..ಡ…ಲೇ….!
ರಾಜನ ಅಣತಿಯಂತೆ ಬೃಹತ್ ಸೈನ್ಯವೇ ಆನೆ ಎದುರು ನಿಂತಿತು. ಯುದ್ಧದ ನಗಾರಿಯನ್ನು ಜೋರಾಗಿ ಬಾರಿಸ ಲಾಯಿತು. ಮಾಡತೊಡಗಿದರು. ಸೈನಿಕರು ಕೋಲಾಹಲ
ಭೇರಿಯ ಸದ್ದು, ಸೈನಿಕರ ಪಥಚಲನ, ಅವರ ಕೋಲಾಹಲವನ್ನೆಲ್ಲ ಕಂಡಾಗ ಆನೆಯ ಮನೋಬಲ ಹೆಚ್ಚಿ ಆತ್ಮಶಕ್ತಿ ಉಕ್ಕಿತು. ಒಂದೇ ನೆಗೆತದಲ್ಲಿ ಅದು ಕೆಸರಿನಿಂದ ಹೊರಗೆ ಬಂದೇ ಬಿಟ್ಟಿತು. ನಗಾರಿಯ ಸದ್ದು ಕೇಳಿದ್ದೇ ಸರಿ, ತಾನೀಗ ಶಕ್ತಿಹೀನ, ವೃದ್ಧ ಎಂಬುದನ್ನೆಲ್ಲ ಅದು ಮರೆತೇ ಬಿಟ್ಟಿತ್ತು. ಅದರ ಸುಪ್ತಶಕ್ತಿ ತಕ್ಷಣವೇ ಉಕ್ಕಿ ಹರಿದಿತ್ತು!
ನೀತಿ :– ಆತ್ಮವಿಶ್ವಾಸ ಹೆಚ್ಚಿಸಲು ಹಿಂದಿನ ಘಟನಾವಳಿಗಳನ್ನು ಸ್ಮರಿಸಬೇಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.