ಸಲಹುವ ‘ಕೈ’ ಸುಂದರ..! ಹಾರ್ಟ್ ಟಚಿಂಗ್ ಕಥೆ ಓದಿ
ಸಲಹುವ ಕೈ ಸುಂದರ..
ಆರು ವರ್ಷದ ಮಗುವಿಗೆ ಅಮ್ಮನ ಮುಖ ತುಂಬ ಸುಂದರವಾಗಿ ಕಂಡಿತು. ಆಶ್ಚರ್ಯದಿಂದಲೇ “ಹೇಗಮ್ಮಾ ನಿನ್ನ ಮುಖ ಪೂರ್ಣಿಮೆ ಚಂದ್ರನಂತಿದೆ?” ಎಂದು ಕೇಳಿದ.
ಅಮ್ಮನಿಗೆ ತಕ್ಷಣ ಮಗನ ಮೇಲೆ ಉಕ್ಕಿತು ಪ್ರೀತಿ, ಅವಳು ತನ್ನ ಕೈಗಳಿಂದ ಮಗನ ಕೆನ್ನೆಯನ್ನು ಸವರಿದಳು. ತಕ್ಷಣ ಮಗ ಕಿರುಚಿದ “ಅಮ್ಮಾ, ಇದೇನಿದು ನಿನ್ನ ಕೈ ಇಷ್ಟೊಂದು ಒರಟಾಗಿದೆ? ಒಳ್ಳೆ ಸೌದೆಯಂತಿದೆ… ಚರ್ಮವೆಲ್ಲ ಕಿತ್ತೇ ಹೋಗಿದೆ… ಛೇ, ಇಂಥ ಕೈಯಲ್ಲಿ ನನ್ನ ತಲೆ ಸವರುವಿಯಲ್ಲಮ್ಮಾ…”
ತಕ್ಷಣ ಅವನು ತಂದೆಯ ಬಳಿಗೆ ಬಂದು ಹೇಳಿದ. “ನಿನಗೊಂದು ಕಥೆ ಹೇಳುವೆ ಕೇಳು. ಒಂದು ಊರಲ್ಲಿ ಒಂದು ಮಗುವಿತ್ತು. ತೊಟ್ಟಿಲಲ್ಲಿ ಮಲಗಿರುವಾಗ ಫಕ್ಕನೆ ಗುಡಿಸಲಿನ ಮಾಡಿನಿಂದ ಬೆಂಕಿ ಇಳಿದು ಬಂತು. ಮಗುವನ್ನಾಡಿಸುತ್ತಿದ್ದ ಹುಡುಗಿ, ಬೆಂಕಿ, ಬೆಂಕಿ’ ಎಂದು ಹೆದರಿ ಓಡಿಯೇ ಬಿಟ್ಟಳು. ಅಡುಗೆ ಮನೆಯಿಂದ ಅಮ್ಮ ಒಂದೇ ಉಸಿರಲ್ಲಿ ತೊಟ್ಟಿಲ ಬಳಿಗೆ ಬಂದು ಪ್ರಜ್ವಲಿಸುವ ಕೆನ್ನಾಲಗೆಗೂ ಹೆದರದೆ ಮಗುವನ್ನು ತಕ್ಷಣವೇ ಎತ್ತಿಕೊಂಡು ಓಡಿಬಿಟ್ಟಳು…
“ಆಗ ಪಾಪ, ಆಕೆಯ ಅಂಗೈ ಬೆಂದೇ ಹೋಯಿತು. ಆದರೆ ಮಗುವಿನ ಪ್ರಾಣ ಉಳಿಸಿದ ಹಿಗ್ಗಿನಿಂದ ಆ ನೋವನ್ನೆಲ್ಲ ಮರೆತೇ ಬಿಟ್ಟಳು…” ಎಂಬಾಗಲೇ ಮಗ ಆ ಅಮ್ಮ ಎಂಥ ಧೀರೆ ಅಲ್ಲವೇ?, ಎಂದಾಗ ಅಪ್ಪನೆಂದ “ಆಕೆ ಯಾರೆಂದು ಗೊತ್ತೇ ನಿನಗೆ?” ಎಂಬಾಗ ‘ನಿನ್ನ ಸ್ವಂತ ಅಮ್ಮ ಅದು. ಅವಳೇ ಕೈ ಸುಟ್ಟುಕೊಂಡವಳು. ಅವಳೇ ನಿನ್ನ ಪ್ರಾಣ ಉಳಿಸಿದ ಮಹಾ ದೇವತೆ, ಹಾಗೆಂದೇ ಅವಳ ಕೈ ವಿಕಾರವಾಗಿದೆ ಇಂದು…”
ತಕ್ಷಣ ಮಗ ಓಡಿ ಹೋಗಿ ಅಮ್ಮನ ತೊಡೆಯಲ್ಲಿ ಪವಡಿಸಿ ಅವಳನ್ನೇ ತಬ್ಬಿಕೊಂಡು ನನ್ನಮ್ಮಾ, “ನೀನೇ ದೇವತೆ ನನಗೆ” ಎಂಬಾಗ ಕಣ್ಣುಂಬಿತ್ತು.
ನೀತಿ :– ತಾಯಿಯ ಪ್ರೀತಿಗೆ ಯಾವುದಿದೆ ಸಾಟಿ ? ಅಮ್ಮನ ಸ್ಮರಣೆಯೇ ಉತ್ಸಾಹವನ್ನು ಉಕ್ಕಿಸುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.