ನಾನೂ ಯಾತ್ರಿಕನೇ..
ಅಮೆರಿಕನ್ ಒಬ್ಬ ಸೂಫಿ ಸಂತರ ಪ್ರವಚನಗಳನ್ನು ಕೇಳಿ ಅದರಿಂದ ಅಪಾರ ಪ್ರಭಾವಿತನಾದ. ಆತ ಈ ಸಂತರನ್ನು ನೋಡಲೇಬೇಕೆಂದು ಭಾರತಕ್ಕೆ ಹುಡುಕಿಕೊಂಡು ಬಂದ.
ಅಲ್ಲಿ ಸಂತರ ಕೋಣೆಯೊಳಗೆ ಹೋಗುತ್ತಿದ್ದಂತೆ ಆತನಿಗೆ ಅತ್ಯಾಶ್ಚರ್ಯವಾಯಿತು. ಅಷ್ಟು ದೊಡ್ಡ ಕೋಣೆಯಲ್ಲಿ ಒಂದೇ ಒಂದು ಪೀಠೋಪಕರಣ ಇರಲಿಲ್ಲ. ಸಂತರು ನೆಲದ ಮೇಲೆ ಕುಳಿತಿದ್ದರು. ಅಮೆರಿಕನ್ ಪ್ರಶ್ನಿಸಿದ. ನಿಮ್ಮ ಪೀಠೋಪಕರಣಗಳಲ್ಲಿವೆ ಗುರುಗಳೇ ?
ನಕ್ಕ ಸಂತರು ಆತನನ್ನು ಮರುಪ್ರಶ್ನಿಸಿದರು. ನಿನ್ನ ಪೀಠೋಪಕರಣಗಳು ಎಲ್ಲಿವೆ ?
ನಾನೊಬ್ಬ ಯಾತ್ರಿಕ ಹೀಗಾಗಿ ನನ್ನ ಪೀಠೋಪಕರಣಗಳು ಮನೆಯಲ್ಲಿವೆ.
ಸಂತರು ಹೇಳಿದರು. ನಾನೂ ಕೂಡಾ ಯಾತ್ರಿಕನೆ. ಒಂದಿಷ್ಟು ದಿನ ಈ ಭೂಮಿಯ ಮೇಲಿದ್ದು ಹೋಗಲು ಬಂದಿದ್ದೇನೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.