ಪ್ರಯತ್ನ ನಿರಂತರವಾಗಿರಲಿ
ಕಪ್ಪೆಯೊಂದು ಹಾರುತ್ತಾ ಹಾರುತ್ತಾ ಮಜ್ಜಿಗೆ ಬಕೆಟ್‌ನೊಳಗೆ ಬಿದ್ದಿತು. ಅದೆಷ್ಟೇ ಎತ್ತರಕ್ಕೆ ಹಾರಿದರೂ ಬಕೆಟ್‌ನ ಮೇಲೆ ಹಾರಲು ಸಾಧ್ಯವಾಗಲಿಲ್ಲ. ಹಾರಿದಷ್ಟು ಬಾರಿ ಕೆಳಗೆ ಆಳಕ್ಕೆ ಹೋಗಿ ಬರುತ್ತಿತ್ತು,
ಆದರೆ ಕಪ್ಪೆ ತನ್ನ ಪ್ರಯತ್ನ ಬಿಡಲಿಲ್ಲ, ದಣಿವಾದಾಗ ಕಾಲ್ಗಳನ್ನು ನಿಂತಲ್ಲೇ ಬಡಿಯತೊಡಗಿತು. ಇದು ಎರಡು ಮೂರು ಗಂಟೆಗಳ ಕಾಲ ನಡೆದ ನಂತರ ಮಜ್ಜಿಗೆಯಲ್ಲಿ ಬೆಣ್ಣೆ ತಯಾರಾಯಿತು. ಈಗ ಕಪ್ಪೆ ಬೆಣ್ಣೆಯ ಮೇಲೆ ನಿಂತು ಮೇಲೆ ಹಾರಿತು. ಅಂತೂ ಹೊರಗೆ ಬರುವಲ್ಲಿ ಸಫಲವಾಯಿತು.
ನೀತಿ :– ಮನುಷ್ಯನಿಗೆ ಕಷ್ಟ ಬರುವುದು ಸಹಜ ಆದರೆ ಕಷ್ಟಕ್ಕೆ ಹೆದರದೆ ಸತತ ಪ್ರಯತ್ನದಿಂದ ಅವನು ತನ್ನ ಗುರಿಯನ್ನು ಸಾಧಿಸಲು ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.