ಪ್ರಮುಖ ಸುದ್ದಿ

ವಾತ್ಸಲ್ಯ ನೇತ್ರ ಅತಿ ಚಿಕ್ಕ ಕಥೆ

ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ

ವಾತ್ಸಲ್ಯ ನೇತ್ರ

ಈ ಪ್ರಪಂಚದಲ್ಲಿರುವ ಎಲ್ಲ ವಸ್ತುಗಳು ಕಣ್ಣಿಗೆ ಕಾಣುತ್ತವೆ ಎಂದು ಹೇಳಲಾಗದು. ಹೊರಕಣ್ಣಿಗೆ ಕಾಣದಿದ್ದರೂ ಒಳಗಣ್ಣಿಗೆ ಕಂಡೇ ಕಾಣುತ್ತವೆ. ಈ ಒಳಗಣ್ಣು ಅಥವಾ ಜ್ಞಾನದ ಕಣ್ಣು ಉಳ್ಳವರೇ ಗುರು, ಹಿರಿಯರು.

ಥಾಮಸ್ ಆಳ್ವಾ ಎಡಿಸನ್ ಜಗತ್ಪ್ರಸಿದ್ಧ ವಿಜ್ಞಾನಿಯಾಗಿದ್ದ. ಅವನು ನಿರುಪಯುಕ್ತ ಹುಡುಗನೆಂದು ಶಾಲೆಯಿಂದ ಹೊರಹಾಕಿದ್ದರು. ಆತನನ್ನು ಮನೆಗೆ ಕರೆದು ತರುವಾಗ ಅವನ ತಾಯಿ ಶಿಕ್ಷಕನಿಗೆ ಹೇಳಿದ್ದಳು.

“ಮಹಾನುಭಾವನೆ, ಈ ನನ್ನ ಮಗನೇ ನಾಳೆ ಜಗತ್ಪಸಿದ್ಧ ವಿಜ್ಞಾನಿಯಾಗುತ್ತಾನೆ, ನೋಡುತ್ತಿರು” ನಿಜವಾಗಿಯೂ ಎಡಿಸನ್ನನು ಬೆಳೆದು ದೊಡ್ಡವನಾದಾಗ ನೂರಾರು ಸಂಶೋಧನೆಗಳಲ್ಲಿ ತೊಡಗಿದ, ಜಗತ್ಪಸಿದ್ಧ ವಿಜ್ಞಾನಿಯಾದ. ಆ ಬಾಲಕನಲ್ಲಿ ಹುದುಗಿದ್ದ ಮಹಾವಿಜ್ಞಾನಿ ಶಿಕ್ಷಕನಿಗೆ ಕಾಣಲಿಲ್ಲ. ತಾಯಿಯ ವಾತ್ಸಲ್ಯ ನೇತ್ರಕ್ಕೆ ಮಾತ್ರ ಕಂಡಿದ್ದ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button