ಶ್ರೇಯಸ್ಸು ಯಾರಿಗೆ ?
ನಾವು ಜೀವನದಲ್ಲಿ ಗಳಿಸುವ ಸಿರಿ, ಸಂಪದ, ಸ್ಥಾನ-ಮಾನ, ಪದವಿ, ಪ್ರಶಸ್ತಿ ಮುಖ್ಯವಲ್ಲ. ಆದರೆ ಅವುಗಳನ್ನು ಗಳಿಸಲು ಅನುಸರಿಸಿದ ಮಾರ್ಗವು ಮುಖ್ಯವಾದುದು. ಆ ಮಾರ್ಗವು ಸತ್ಯ ಶುದ್ಧವಾಗಿದ್ದರೆ ನಮ್ಮ ಗಳಿಕೆಗೆ ಬೆಲೆ ಬರುತ್ತದೆ ಇಲ್ಲದಿದ್ದರೆ ಇಲ್ಲ.
ಒಬ್ಬ ಶಾಲಾ ಬಾಲಕ ಎಂದೂ ಪಾಠ ಪ್ರವಚನ ಸರಿಯಾಗಿ ಕೇಳಿದವನಲ್ಲ, ಓದಿದವನಲ್ಲ. ಪರೀಕ್ಷೆಯಲ್ಲಿ ಹಿಂದಿನವರು ಮುಂದಿನವರು ಬರೆದುದನ್ನು ನೋಡಿ ಬರೆದು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಊರೆಲ್ಲ ಸಿಹಿ ಹಂಚುತ್ತಿದ್ದ, ಹೆಮ್ಮೆ ಪಡುತ್ತಿದ್ದ.
ನಂತರ ಶಾಲಾ ಗುರುಗಳಿಗೂ ಸಿಹಿ ಕೊಡಲು ಹೋದ. ಆತನ ಪ್ರಗತಿಯನ್ನೆಲ್ಲ ಚೆನ್ನಾಗಿ ಬಲ್ಲ ಗುರುಗಳು ಹೇಳಿದರು “ಈ ಶ್ರೇಯಸ್ಸು ನಿನಗಲ್ಲ, ಪರೀಕ್ಷೆಯಲ್ಲಿ ನಿನ್ನ ಹಿಂದೆ ಮುಂದೆ ಕುಳಿತ ಗೆಳೆಯರಿಗೆ” ಗುರುಗಳ ಮಾತನ್ನು ಕೇಳುತ್ತಲೇ ಬಾಲಕ ನಾಚಿ ನೀರಾದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.