“ಕಾಡಿದ ಪಾಪಪ್ರಜ್ಞೆ” ಮಾನವೀಯತೆ ಹೊಂದಿದ ಸಾಮಾನ್ಯನ ತೊಳಲಾಟ ಓದಿ ಕಾಮೆಂಟ್ ಮಾಡಿ
ಅರಿವಿಲ್ಲದೆ ಚರಿತ್ರೆ ಪುಟ ಸೇರಿದ್ದ ಅರಿವಾಗದಂತೆ ಬದುಕು ಮುಗಿಸಿದ
ದಿನಕ್ಕೊಂದು ಕಥೆ
ಅರಿವಿಲ್ಲದಂತೆಯೇ ಚರಿತ್ರಾರ್ಹರಾದವರು, ಅರಿವಾಗದಂತೆ ಮರೆಯಾದವರು..!
ಅರಿವಿಲ್ಲದೆ ಚರಿತ್ರೆ ಪುಟ ಸೇರಿದ್ದ ಅರಿವಾಗದಂತೆ ಬದುಕು ಮುಗಿಸಿದ.!
ಅತ್ಯದ್ಭುತವಾದ, ಜಗತ್ತಿನ ಚರಿತ್ರೆಯಲ್ಲಿ ಅಭೂತ ಪೂರ್ವವಾದ ಘಟನೆ! ಅಂಥ ಚರಿತ್ರಾರ್ಹ ಘಟನೆಯಲ್ಲಿ ಅರಿವಿಲ್ಲದಂತೆ ಭಾಗಿಯಾದ, ಆನಂತರ ಅರಿವಾಗದಂತೆ ಮರೆಯಾದ ಒಬ್ಬರ ನಿಜ ಜೀವನದ ಘಟನೆ!
ಆತ ಸೇನೆಯಲ್ಲಿ ಒಬ್ಬ ಯುದ್ಧವಿಮಾನ ಚಾಲಕ. ಸೇನೆಯ ನೂರಾರು ವಿಮಾನ ಚಾಲಕರಲ್ಲಿ ಆತನೂ ಒಬ್ಬ. ಎರಡನೆಯ ಮಹಾಯುದ್ಧದ ಸಮಯ. ಒಂದು ಮುಂಜಾನೆ ಆತ ಕೆಲಸಕ್ಕೆ ಹಾಜರಾದಾಗ, ಮೇಲಧಿಕಾರಿಗಳು ಆತನಿಗೆ ‘ಇಂದು ನಿನಗೆ ಜವಾಬ್ದಾರಿಯುತವಾದ ಕೆಲಸ ವಹಿಸಲಾಗುತ್ತಿದೆ. ಈ ಭೂಪಟದಲ್ಲಿ ಗುರುತು ಮಾಡಿರುವ ಹಾದಿಯಲ್ಲೇ ವಿಮಾನ ಚಲಾಯಿಸಿಕೊಂಡು ಹೋಗು. ನಿನ್ನ ಆಸನದ ಎಡಭಾಗದಲ್ಲಿ ಆರು ಬಟನ್ನುಗಳಿವೆ.
ಇಲ್ಲಿ ಗುರುತು ಮಾಡಿರುವ ಊರಿನ ಮೇಲೆ ಹೋಗುವಾಗ, ಎರಡೆರೆಡು ನಿಮಿಷಗಳ ಅಂತರದಲ್ಲಿ ಒಂದೊಂದಾಗಿ ಬಟನ್ನುಗಳನ್ನು ಒತ್ತಬೇಕು. ಹಾಗೆ ಒತ್ತಿಯಾದ ನಂತರ ಕೆಳಕ್ಕೆ ಬಗ್ಗಿ ನೋಡಬೇಡ. ಹಿಂತಿರುಗಿಯೂ ನೋಡಬೇಡ. ವಿಮಾನ ಚಲಾಯಿಸಿಕೊಂಡು ವೈಮಾನಿಕ ನೆಲೆಗೆ ಹಿಂತಿರುಗಿ ಬಾ’ಎಂದು ಹೇಳಿ ಕಳುಹಿಸಿದರು.
ಆತ ಅದರಂತೆಯೇ ಮಾಡಿದರು. ವೈಮಾನಿಕ ನೆಲೆಗೆ ಹಿಂತಿರುಗಿದಾಗ ಆತನಿಗೆ ‘ನಿನ್ನ ಇಂದಿನ ಕೆಲಸ ಮುಗಿಯಿತು. ನೀನು ಹೋಗಿ ವಿಶ್ರಾಂತಿ ಪಡೆಯಬಹುದು’ಎಂದು ಹೇಳಿ ಕಳುಹಿಸಲಾಯಿತು.
ಆಗಿನ ಕಾಲದಲ್ಲಿ ಈಗಿನಂತೆ ದೂರದರ್ಶನಗಳು, ದೂರಸಂಪರ್ಕ ಸಲಕರಣೆಗಳು ಇರಲಿಲ್ಲ. ಆತ ಕ್ಯಾಂಪಿಗೆ ಹೋಗಿ ನಿರಾಳವಾಗಿ ನಿದ್ರಿಸಿದ. ಮರುದಿನ ಆತ ಕಚೇರಿಗೆ ಬಂದಾಗ, ಕಚೇರಿಯಲ್ಲಿ ಉದ್ರಿಕ್ತ ವಾತಾವರಣ. ಎಲ್ಲರೂ ಏನೋ ಮಹತ್ತರವಾದುದನ್ನು ಸಾಧಿಸಿರುವಂತೆ ಮಾತನಾಡಿಕೊಳ್ಳುತ್ತಿದ್ದರು.
ಆತನನ್ನು ಸೇನೆಯ ಮುಖ್ಯಸ್ಥರು ಕರೆದು ಅಭಿನಂದಿಸಿದರು. ಆತನಿಗೆ ವೃತ್ತಿಯಲ್ಲಿ ಮುಂಬಡ್ತಿ ಹಾಗು ಸಂಬಳದಲ್ಲೂ ಹೆಚ್ಚಳವಾಗಿರುವ ಶುಭ ಸಮಾಚಾರ ತಿಳಿಸಿದರು. ಆಶ್ಚರ್ಯದಿಂದಲೇ ಅದನ್ನು ಸ್ವೀಕರಿಸಿದ ಆತ ಹೊರಕ್ಕೆ ಬಂದು ತನ್ನ ಸಹೋದ್ಯೋಗಿಗಳೊಡನೆ ವಿಷಯವೇನೆಂದು ವಿಚಾರಿಸಿದರು. ಆಗ ಆತನಿಗೆ ತಿಳಿದು ಬಂದ ವಿವರಗಳು ಹೀಗಿದ್ದವು.
ಹಿಂದಿನ ದಿನ ಆತನನ್ನು ಜಪಾನಿನ ಹಿರೋಶಿಮಾ ನಗರದ ಮೇಲೆ ಆಟಮ್ ಬಾಂಬ್ ಹಾಕಲು ನಿಯೋಜಿಸಲಾಗಿತ್ತು. ಆತ ಆರು ಬಟನ್ ಗಳನ್ನು ಒತ್ತಿದಾಗ, ವಿಮಾನದಿಂದ ಹಿರೋಶಿಮಾ ನಗರದ ಮೇಲೆ ಆಟಮ್ ಬಾಂಬುಗಳು ಸಿಡಿದಿದ್ದವು. ಕಣ್ಮುಚ್ಚಿ ತೆಗೆಯುವುದರೊಳಗಾಗಿ ಸಾವಿರಾರು ಜನ ಸಾವಿಗೀಡಾಗಿದ್ದರು. ಅಂದರೆ ಸಾವಿರಾರು ಜನರ ಸಾವಿಗೆ ಆತನ ಕಾರ್ಯಾಚರಣೆ ಕಾರಣವಾಗಿತ್ತು.
ಇದನ್ನು ಕೇಳಿದ ತಕ್ಷಣ ಆತ ‘ಅಷ್ಟೊಂದು ಮುಗ್ಧರ ಸಾವಿಗೆ ನಾನು ಕಾರಣನಾದೆನೇ? ವೃತ್ತಿಯಲ್ಲಿ ಮುಂಬಡ್ತಿ ಮತ್ತು ಸಂಬಳದ ಹೆಚ್ಚಳ ಪಡೆದದ್ದು ಮುಗ್ಧರ ಮಾರಣಹೋಮದಿಂದಾಗಿಯೇ? ಯುದ್ಧದಲ್ಲಿ ಎಂದೂ
ನೇರವಾಗಿ ಭಾಗವಹಿಸದ, ತಮ್ಮ ಪಾಡಿಗೆ ತಾವು ತಂತಮ್ಮ ಗ್ರಾಮಗಳಲ್ಲಿ ವ್ಯವಸಾಯ ಮಾಡಿಕೊಂಡೋ, ಕೂಲಿ-ನಾಲಿ ಮಾಡಿಕೊಂಡೋ, ಬಾಳಿ ಬದುಕುತ್ತಿದ್ದ ಜನರನ್ನು ನಾನು ಕೊಂದುಹಾಕಿದ್ದೇನೆ’ಎಂಬೆಲ್ಲ ಯೋಚನೆಗಳು ಆತನ ಮನಸ್ಸಿನಲ್ಲಿ ಸುಳಿದು ಹೋದವು. ಆತನ ಸಂಭ್ರಮ ಸಡಗರ ಜರ್ರೆಂದು ಇಳಿದು ಹೋಯಿತು.
ಆತ ತೀವ್ರವಾದ ಖಿನ್ನತೆಗೆ ಒಳಗಾದರು. ಅಸ್ವಸ್ಥರಾದರು. ಆಸ್ಪತ್ರೆಗೆ ಸೇರಿಸಲ್ಪಟ್ಟರು. ಅಲ್ಲಿಯೂ ಮಾರಣ ಹೋಮದ ಬಗ್ಗೆಯೇ ಕನವರಿಸುತ್ತಿದ್ದರು. ವರ್ಷಗಟ್ಟಲೆ ಚಿಕಿತ್ಸೆ ಪಡೆದರು. ಆತ ಮನಸ್ಸು ಮಾಡಿದ್ದರೆ ಸೇನೆಯಲ್ಲಿ ಇನ್ನೂ ಮೇಲಿನ ಹುದ್ದೆ ಅಲಂಕರಿಸಬಹುದಿತ್ತು. ಸವಲತ್ತುಗಳನ್ನೆಲ್ಲಾ ಪಡೆಯಬಹುದಿತ್ತು. ವಿಲಾಸ ಭರಿತ ಜೀವನ ನಡೆಸಬಹುದಾಗಿತ್ತು. ಆದರೆ ಸಾವಿರಾರು ಜನರ ಸಾವಿಗೆ ಕಾರಣನಾದೆನೆಂಬ ಪಾಪಪ್ರಜ್ಞೆ ಆತನನ್ನು ಕಾಡುತ್ತಿತ್ತು.
ಆನಂತರ ಆತ ಯಾವುದೋ ಸಣ್ಣದೊಂದು ಆಸ್ಪತ್ರೆಯಲ್ಲಿ ಶುಶ್ರೂಷಕನಾಗಿ ಕೆಲಸ ಮಾಡುತ್ತಾ ಬದುಕನ್ನು ಸವೆಸಿದರಂತೆ. ಜಗತ್ತಿನ ಚರಿತ್ರೆಯ ಪುಟಗಳಲ್ಲಿ ತನ್ನ ಹೆಸರನ್ನು ಸೇರಿಸಿಕೊಳ್ಳಬಹುದಾದ ಕೆಲಸವನ್ನು ಮಾಡಿದ್ದ ಆತ ಅನಾಮಧೇಯನಾಗಿ ಬದುಕಿನ ಕೊನೆಯ ಉಸಿರೆಳೆದರಂತೆ! ಆತ ಸತ್ತ ಸುದ್ದಿ ಯಾವ ಪತ್ರಿಕೆಯಲ್ಲೂ ಪ್ರಕಟವಾಗಲಿಲ್ಲವಂತೆ!
ಅಸಾಮಾನ್ಯ ಕೆಲಸವನ್ನು ಮಾಡಿದ ಶ್ರೀಸಾಮಾನ್ಯನೊಬ್ಬನ ನಿಜ ಜೀವನದ ಈ ಘಟನೆಯನ್ನು ಓದಿದರೆ ನಮಗೂ ಕರಳು ಕಿವುಚಿದಂತೆ ಅನಿಸುತ್ತದಲ್ಲವೇ? ವೃತ್ತಿಯಲ್ಲಿ ಮುಂಬಡ್ತಿ, ಸಂಬಳದಲ್ಲಿ ಹೆಚ್ಚಳ ಸಿಗದಿದ್ದರೂ ಚಿಂತೆಯಿಲ್ಲ ಅನಿಸುತ್ತದಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.