ದಿನಕ್ಕೊಂದು ಕಥೆ
ಸತ್ಯವು ಬಹುಮುಖಿ
ಪರಮ ಸತ್ಯ ಪರಮಾತ್ಮನಿಂದ ಈ ಜಗತ್ತು ನಿರ್ಮಾಣವಾಗಿದೆ, ಅವನನ್ನು ಅರಿತಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ಆದರೆ ಅರಿಯುವುದು ಅಷ್ಟು ಸುಲಭವಾದುದಲ್ಲ.
ಒಂದು ಜನ ಜನಿತ ಕಥೆ, ನಾಲ್ಕು ಜನ ಹುಟ್ಟು ಗುರುಡರು ಆನೆಯನ್ನು ನೋಡಲು ಹೋದರು. ಒಬ್ಬ ಅದರ ಕಿವಿ ಮುಟ್ಟಿ “ಆನೆಯು ಮೊರದಂತಿದೆ” ಎಂದ. ಮತ್ತೊಬ್ಬ ಬಾಲ ಮುಟ್ಟಿ “ಆನೆ ಹಗ್ಗದಂತಿದೆ” ಎಂದ. ಮಗದೊಬ್ಬ ಹೊಟ್ಟೆ ಮುಟ್ಟಿ “ಆನೆಯು ನಗಾರಿಯಂತಿದೆ” ಎಂದ. ಇನ್ನೊಬ್ಬ ಕಾಲು ಮುಟ್ಟಿ ಕಂಬದಂತಿದೆ ಎಂದ. ಅವರೆಲ್ಲರೂ ಆನೆಯ ಒಂದೊಂದು ಅವಯವ ಮುಟ್ಟಿ ಅದೇ ಆನೆ ಎಂದು ಭಾವಿಸಿದರು.
ಆನೆಯ ಕಿವಿ ಮೊರದಂತೆ, ಬಾಲ ಹಗ್ಗದಂತೆ, ಹೊಟ್ಟೆಯು ನಗಾರಿಯಂತೆ, ಕಾಲು ಕಂಬದಂತೆ ಇರುವುದು ನಿಜ, ಆದರೆ ಅದೇ ಆನೆಯ ಸ್ವರೂಪವಲ್ಲ ಆದ್ದರಿಂದ ಅವರೆಲ್ಲರೂ ಹೇಳುವುದು ಅರ್ಧ ಸತ್ಯವೇ ವಿನಾ ಪೂರ್ಣ ಸತ್ಯವಲ್ಲ.
ಈ ಜಗತ್ತಿನಲ್ಲಿ ಪರಮ ಸತ್ಯವು ಅನಂತವಾಗಿದೆ. ಅದರಲ್ಲಿ ನಮಗೆ ಕಂಡಿದ್ದಷ್ಟೇ ಸತ್ಯವಲ್ಲ. ಅದು ಸತ್ಯದ ಒಂದು ಅಂಶ ಮಾತ್ರ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.