ದಿನಕ್ಕೊಂದು ಕಥೆ
ಅಪರಿಚಿತರು ಮಾಡುವ ನೋವಿಗಿಂತ, ಸ್ವಂತದವರಿಂದ ಉಂಟಾಗುವ ನೋವು ಹೆಚ್ಚು
ಒಬ್ಬ ಅಕ್ಕಸಾಲಿಗನ ಅಂಗಡಿಯ ಪಕ್ಕದಲ್ಲೇ ಒಬ್ಬ ಕಮ್ಮಾರನ ಕುಲುಮೆ ಇತ್ತು. ಅಕ್ಕಸಾಲಿಗನು ತನ್ನ ಅಂಗಡಿಯಲ್ಲಿ ಕೆಲಸ ಮಾಡುವಾಗ ತುಂಬಾ ಸಣ್ಣದಾದ ಶಬ್ದವು ಕೇಳಿಸುತ್ತಿತ್ತು. ಆದರೆ ಕಮ್ಮಾರನು ತನ್ನ ಕುಲುಮೆಯಲ್ಲಿ ಕೆಲಸ ಮಾಡುವಾಗ ಅಲ್ಲಿಂದ ಕಿವಿಯ ಒಳತಮಟೆಯು ಹರಿದೇ ಹೋಗುವುದೇನೋ ಎಂಬಷ್ಟು ಕರ್ಕಶವಾಗಿ ಶಬ್ದ ಬರುತ್ತಿತ್ತು.
ಒಂದು ದಿನ ಅಕ್ಕಸಾಲಿಗನು ಕೆಲಸ ಮಾಡುವಾಗ ಚಿನ್ನದ ಒಂದು ತುಣುಕು ಸಿಡಿದು ಕಮ್ಮಾರನ ಕುಲುಮೆಗೆ ಬಿತ್ತು. ಅಲ್ಲಿ ಅದು ಒಂದು ಕಬ್ಬಿಣದ ತುಣುಕನ್ನು ಭೇಟಿಯಾಯಿತು.
ಆಗ ಚಿನ್ನದ ತುಣುಕು ಕಬ್ಬಿಣದ ತುಣುಕಿಗೆ ಹೇಳಿತು ಸಹೋದರ, “ನಮ್ಮಿಬ್ಬರ ಕಷ್ಟವು, ದುಃಖವು ಸಮಾನವಾಗಿದೆ, ನಮ್ಮಿಬ್ಬರನ್ನೂ ಒಂದೇ ರೀತಿಯಲ್ಲಿ ಬೆಂಕಿಯಲ್ಲಿ ಚನ್ನಾಗಿ ಬಿಸಿಮಾಡುತ್ತಾರೆ, ಮತ್ತು ಸುತ್ತಿಗೆಯ ಏಟಿನ ಹೊಡೆತಗಳ ಚಿತ್ರಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ನಾನು ನನ್ನ ನೋವುಗಳನ್ನು ಮೌನವಾಗಿ ಸಹಿಸುತ್ತೇನೆ, ಆದರೆ ನೀನು ತುಂಬಾ ಆಕ್ರಂದನ ಮಾಡುವೆ ಏಕೆ?” ಎಂದಿತು.
ಅದಕ್ಕೆ ಕಬ್ಬಿಣದ ತುಣುಕು ಹೇಳಿತು – “ನೀನು ಹೇಳಿದ್ದು ಸರಿ. ಆದರೆ ನಿನ್ನ ಮೇಲೆ ಏಟಿನ ಹೊಡೆತಗಳನ್ನು ಕೊಡುವ ಸುತ್ತಿಗೆಯು ನಿನ್ನ ಸ್ವಂತ ಸಹೋದರನಲ್ಲ. ಆದರೆ ನನಗೆ ಹೊಡೆಯುವ ದಪ್ಪ ಕಬ್ಬಿಣದ ಸುತ್ತಿಗೆಯು ನನ್ನ ನಿಜವಾದ ಸ್ವಂತ ಸಹೋದರ.” ಅದಕ್ಕೇ ನಾನು ಆಘಾತದಿಂದ ಕಿರುಚುತ್ತೇನೆ ಎಂದು ದುಃಖದಿಂದ ಉತ್ತರಿಸಿತು.
ಸ್ವಲ್ಪಹೊತ್ತು ಸುಮ್ಮನಿದ್ದ ಕಬ್ಬಿಣದ ಕಣವು ಮತ್ತೆ ಹೇಳಿತು – “ನಮ್ಮ ಸ್ವಂತದವರಿಂದ , ಪ್ರೀತಿಪಾತ್ರರಿಂದ ಉಂಟಾಗುವ ಗಾಯದ ನೋವು, ಅಪರಿಚಿತರು ಮಾಡುವ ನೋವಿಗಿಂತ ಹೆಚ್ಚು ಅಸಹನೀಯವಾಗಿದೆ.” ಎಂದಿತು.
ಈ ದೃಷ್ಟಾಂತದ ಸಂಭಾಷಣೆಯನ್ನು ಚನ್ನಾಗಿ ಅರ್ಥ ಮಾಡಿಕೊಂಡರೆ,
ನಾವು ಯಾರನ್ನು ನಮ್ಮವರು, ನಮ್ಮ ಸ್ವಂತದವರು ಎಂದು ತಿಳಿದುಕೊಂಡು ಅವರನ್ನು ನಂಬಿ ಅವರಿಂದಲೇ ನಮಗೆ ಅಸಹನೀಯವಾದ ನೋವಾದರೆ ಸಹಿಸಿಕೊಳ್ಳುವುದು ಕಷ್ಟವಾಗುವುದು ಎಂದಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.