ಕಥೆ

ಮುಖಭಂಗ ಅದ್ಭುತ ಕಥೆ ಓದಿ

ದಿನಕ್ಕೊಂದು ಕಥೆ ಓದಿ ಬಾಳಿಗೆ ಆಸರೆಯ ಹಾದಿ

ದಿನಕ್ಕೊಂದು ಕಥೆ

ಮುಖಭಂಗ

ಒಂದು ಹಳ್ಳಿ. ಅಲ್ಲಿ ಹೆಚ್ಚು ಕಡಿಮೆ ಎಲ್ಲ ಬಡ ಕುಟುಂಬಗಳೇ ಇದ್ದವು.

ಒಂದು ಮಾತ್ರ ಶ್ರೀಮಂತ ಕುಟುಂಬವಿತ್ತು. ಈ ಕುಟುಂಬದ ಯಜಮಾನ ಬಡ ಕುಟುಂಬಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಗರ್ವದಿಂದ ಮೆರೆಯುತ್ತಿದ್ದನು. ಇವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಎಲ್ಲರೂ ಕಾಯುತ್ತಿದ್ದರು. ಆ ಹಳ್ಳಿಯಲ್ಲಿ ಪ್ರತಿ ವರ್ಷದಂತೆ ಗ್ರಾಮ ದೇವತೆಯ ಹಬ್ಬ ಬಂತು.

ಸುತ್ತಮುತ್ತಲಿನ ಗ್ರಾಮದವರು ಸೇರಿದ್ದರು. ಗ್ರಾಮ ದೇವತೆಯ ಹಬ್ಬದ ವಿಶೇಷ ದೇವತೆಯ ಮೈ ಮೇಲೆ ಹಾಕಿರುವ ಸೀರೆಯನ್ನು ಹರಾಜು ಹಾಕುವುದಾಗಿತ್ತು. ಅದನ್ನು ತೆಗೆದುಕೊಂಡವರಿಗೆ ಪುಣ್ಯ ಲಭಿಸುವುದು ಎಂಬ ನಂಬಿಕೆಯಿತ್ತು. ಯಾವಾಗಲೂ ಸೀರೆ ಶ್ರೀಮಂತ ಕುಟುಂಬದ ಪಾಲಾಗುತ್ತಿತ್ತು.

ಈ ಸಾರಿ ಹಬ್ಬದಲ್ಲಿ ಹರಾಜು ಪ್ರಾರಂಭವಾಯಿತು. ಹರಾಜು ಕೂಗುವ ವ್ಯಕ್ತಿ ಸೀರೆ ತೋರಿಸುತ್ತಾ ಒಂದು ಸಾವಿರ ಎಂದನು. ಶ್ರೀಮಂತ ಎರಡು ಸಾವಿರ ಎಂದನು, ತಕ್ಷಣವೇ ಗುಂಪಿನಿಂದ ಐದು ಸಾವಿರ ಎಂಬ ಕೂಗು ಕೇಳಿಸಿತು. ಶ್ರೀಮಂತನಿಗೆ ಆಶ್ಚರ್ಯವಾಯಿತು ನೋಡುತ್ತಾನೆ.

ತನ್ನ ಹಳ್ಳಿಯ ಬಡ ಕುಟುಂಬದ ವ್ಯಕ್ತಿಯೊಬ್ಬ ಕೂಗಿದ್ದು ! ಶ್ರೀಮಂತ ಏನನ್ನೂ ತೋರಿಸಿಕೊಳ್ಳದೆ ಮತ್ತೆ ಹತ್ತು ಸಾವಿರ ಎಂದನು. ಶ್ರೀಮಂತನ ಕೂಗಿಗೆ ಪ್ರತಿಯಾಗಿ ನನ್ನ ಇಡೀ ಆಸ್ತಿ ಎಂದು ಬಿಟ್ಟಿ ಬಡವ. ಇದನ್ನು ಕೇಳಿದ ಶ್ರೀಮಂತ ಆತನ ಸರಿಸಮಾನವಾಗಿ ಕೂಗಲು ಧೈರ್ಯ ಬರಲಿಲ್ಲ. ಏನೂ ಮಾತು ಹೊರಡಲಿಲ್ಲ. ಮುಖಭಂಗವಾದಂತಾಗಿ ಮೆಲ್ಲನೆ ಕಾಲುಕಿತ್ತನು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button