ದಿನಕ್ಕೊಂದು ಕಥೆ
ಜ್ಞಾನಕಿಂತಲು ದೊಡ್ಡ ಸಂಪತ್ತು ಯಾವುದು?
ಗುರು ತನ್ನ ಎಲ್ಲಾ ಭಕ್ತರನು ಕರೆದು ಕೊಂಡು ಒಂದು ನದಿ ದಂಡೆಗೆ ಒಯ್ದು ತನ್ನ ಹತ್ತಿರ ಇರುವ ನೂರಾರು ಬಂಗಾರದ ನಾಣ್ಯಗಳನ್ನು ನದಿಯಲ್ಲಿ ಎಸೆದು ನಿಮಗೆ ಬೇಕಿದಷ್ಟು ನಾಣ್ಯವನ್ನು ನದಿಯಲಿ ಮುಳಿಗಿ ನಾಣ್ಯ ಸಂಪಾದಿಸಿ ಎಂದು ಭಕ್ತರಿಗೆ ಹೇಳಿದ.
ಭಕ್ತರೆಲ್ಲ ನದಿಗೆ ಮುಳುಗಿ ಪ್ರಯಾಸ ಪಟ್ಟು ಸಿಕಷ್ಟು ನಾಣ್ಯತೆಗೆದು ಕೊಳ್ಳಲು ಪ್ರಯತ್ನಿಸ ಹತ್ತಿದರು. ಅದರಲೊಬ್ಬ ನದಿಗೆ ಹಾರದೆ ಹಾಗೇ ಕುಳಿತು ಕೊಂಡಿದ್ದ. ಆಗ ಗುರುವು “ನೀನೇಕೆ ನದಿಗೆ ಹಾರಲಿಲ್ಲ ? ಎಂದು ಕೇಳಿದ. ಅವನು “ಕ್ಷಮಿಸಿ ಗುರುಗಳೆ ನಾನು ಸಂಪತ್ತಿನ ಆಸೆಗೆ ಬಿದ್ದು ಮಾಡಬಾರದ ಕರ್ಮಮಾಡಿ ಅತ್ಯಂತ ಶ್ರೀಮಂತನಾದೆ ನನ್ನ ಹತ್ತಿರ ಎಲ್ಲವು ಇತ್ತು. ಆದರೆ ಮನಶಾಂತಿ ಮಾತ್ರ ಇರಲಿಲ್ಲ. ಹಾಗಾಗಿ ಅವುಗಳೆಲ್ಲ ಬಿಟ್ಟು ನಿಮ್ಮ ಹತ್ತಿರ
ಬಂದಮೇಲೆ ನನಗೆ ಗೊತ್ತಾಗಿದೆ ನಿಜವಾದ ಸಂಪತ್ತು ಯಾವುದೆಂದು” ಎಂದ.
ಜ್ಞಾನಕಿಂತಲು ದೊಡ್ಡ ಸಂಪತ್ತು ಯಾವುದಿಲ್ಲ. ಹಾಗಾಗಿ ನಾನು ನದಿಗೆ ಹಾರಲಿಲ್ಲವೆಂದ. ಗುರುವು ನಕ್ಕು ಹೇಳಿದ ಐಶ್ವರ್ಯ ಸಂಪತ್ತು ಶಾಸ್ವತವಲ್ಲವೆಂಬುದು ಗೊತ್ತಿದ್ದು ಅವುಗಳ ಹಿಂದೆ ಜಗವು ಬಿದ್ದಿದೆ.
ಈ ಸಂಪತ್ತಿನಿಂದ ಸುಖ ಸಿಗುವದೆಂಬ ಬ್ರಮದಲ್ಲಿ ಬಿದ್ದಿದ್ದಾರೆ. ಬ್ರಮೆಯಿಂದ ಮುಕ್ತವಾಗುವುದು ನಿಜ ಜ್ಞಾನ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.