ಎತ್ತಿನ ಹಾಲು ತರಲು ಹೇಳಿದ ಮಂತ್ರಿಗೆ ಪಾಠ ಕಲಿಸಿದ ಬಾಲೆ
ಮಂತ್ರಿಯ ಬುದ್ಧಿವಂತಿಕೆ
ಮಂತ್ರಿಗೆ ಪಾಠ ಕಲಿಸಿದ ಬಾಲೆ
ಒಂದು ಊರಿನಲ್ಲಿ ಒಬ್ಬ ಕುಂಬಾರನಿದ್ದ. ಅವನು ಬುದ್ಧಿವಂತ ಹಾಗೂ ಹೃದಯವಂತ. ಜನರೆಲ್ಲರೂ ತಮ್ಮ ಸಮಸ್ಯೆ ಪರಿಹಾರಸಿಕೊಳ್ಳಲು ಅವನ ಬಳಿ ಬರುತ್ತಿದ್ದರು. ಇವನ ಜಾಣ್ನೆಯ ಬಗ್ಗೆ ಕೇಳಿದ ಮಹಾರಾಜ ಅಂಥವನೇ ಮಂತ್ರಿಯಾಗಲು ಯೋಗ್ಯ ಎಂದೆಣಿಸಿ ಅವನನ್ನು ಮಂತ್ರಿಯಾಗಿಸಿದ.
ಆದರೆ ರಾಜ್ಯದ ಸೇನಾಪತಿಗೆ ಒಬ್ಬ ಯಃಕಶ್ಚಿತ್ ಕುಂಬಾರನು ಮಂತ್ರಿಯಾಗುವುದೆಂದರೆ ತನ್ನ ಮರ್ಯಾದೆಗೆ ಕಮ್ಮಿ ಎಂದು ಉರಿದು ಬಿದ್ದ. ಹೇಗಾದರೂ ಮಾಡಿ ಇವನನ್ನು ಕಿತ್ತು ಹಾಕಲು ಯೋಜಿಸಿದ.
ಸರಿಯಾದ ಸಮಯ ನೋಡಿ ರಾಜನ ಕಿವಿ ಊದಿದ. ಊರಿನ ಜನರೆಲ್ಲ ನಗ್ತಾರೆ ಎಂದೂ ಚುಚ್ಚಿಕೊಟ್ಟ, ಆದರೆ ತಕ್ಷಣ ಅವನನ್ನು ಕಿತ್ತು ಹಾಕುವುದೂ ಕಷ್ಟ ಎಂದರಿತೇ ರಾಜನು ಮೂರು ಶರತ್ತುಗಳನ್ನು ಅವನ ಮುಂದಿಟ್ಟ.
1.ಒಂದು ತಂಬಿಗೆ ಎತ್ತಿನ ಹಾಲು ತರಬೇಕು.
2.ಜೇಡನ ಬಲೆಯಿಂದ ಧೋತ್ರ ನೇಯ್ದು ತರಬೇಕು.
3.ಮಂತ್ರಿಯ ಅಂಗಣದ ಬಾವಿಯನ್ನೇ ಅರಮನೆಗೆ ತರಬೇಕು.
ಈ ಸಮಸ್ಯೆಯನ್ನು ಕೇಳಿದಾಗ ಕುಂಬಾರ ನಡುಗಿದ, ಚಿಂತೆಯಿಂದ ಆತ ಅಳುವಾಗ ಅವನ ಮಗಳು ವಿಚಾರಿಸಿದಳು. ಆನಂತರ ಆಕೆಯೇ ಅಪ್ಪಾ , ಚಿಂತಿಸದಿರಿ. ನಾಲ್ಕು ದಿನ ಆಸ್ಥಾನಕ್ಕೆ ಹೋಗದಿರಿ. ಐದನೇ ದಿನ ಸಮಸ್ಯೆ ಪರಿಹರಿಸುವೆ ನಾನೇ ಎಂಬುದಾಗಿ ಧೈರ್ಯ ತುಂಬಿದಳು.
ನಾಲ್ಕು ದಿನ ಕಳೆದವು. ಐದನೇ ದಿನ ಆಕೆ ರಾಜನ ಮುಂದೆ ನಿಂತಳು. ಹೇಳಿದಳು ಮಹಾಸ್ವಾಮಿ , ನನ್ನ ತಂದೆ ಗಂಡು ಮಗು ಹೆತ್ತಿದ್ದಾರೆ. ಹಾಗಾಗಿ ಒಂದು ತಿಂಗಳು ಹೊರಗೆ ಬರುವಂತಿಲ್ಲ ಕ್ಷಮಿಸಬೇಕು ಎನ್ನುತ್ತಿದ್ದಂತೆ ಜನರೆಲ್ಲ ಬಿದ್ದು ಬಿದ್ದು ನಕ್ಕರು. ಗಂಡಸು ಹೆರಲು ಸಾಧ್ಯವೇ? ಎಂಬಾಗಲೇ ಈಕೆ ಎತ್ತು ಹಾಲು ಕೊಡಬಹುದು ಅಂತಾದ್ರೆ? ಗಂಡಸು ಯಾಕೆ ಹೆರಬಾರದು ? ಎಂದಾಗ ಜನರೆಲ್ಲ ಸ್ತಬ್ಧರಾದರು.
ಮತ್ತೆ ಆಕೆ ಜೇಡನ ಬಲೆಯಿಂದ ಧೋತ್ರ ನೇಯಲು ಊರಿನ ಮಧ್ಯೆ ಇರುವ ಕೊಳಕ್ಕೆ ಬೆಂಕಿ ಹಾಕಿಸಿ ಬೂದಿ ತರಿಸಿ ಕೊಡಲೇಬೇಕು. ಹಾಗಾದಲ್ಲಿ ಒಂದೇ ವಾರದಲ್ಲಿ ನೇಯ್ದು ಕಟ್ಟುವೆ ಎಂದಾಗ ಬೇಡ ನನಗೆ ಆ ಧೋತ್ರ ಎಂದನು ಮಹಾರಾಜ. ಮತ್ತೆ ಸಾವಿರ ಅಡಿ ಉದ್ದದ ಹಗ್ಗ ತಂದು ನಮ್ಮ ಅಂಗಳದ ಬಾವಿಗೆ ಕಟ್ಟುವೆ.
ಇನ್ನೊಂದು ತುದಿ ನಿಮ್ಮ ಬಾವಿಗೆ ಕಟ್ಟಿ ಆ ಬಾವಿಗೆ ಈ ಬಾವಿನ ಎಳೆದು ತರುವಂತೆ ಆಜ್ಞೆ ಮಾಡುವೆ ಎಂದಾಗಲೇ ಜನರೆಲ್ಲ ಬಿದ್ದು ಬಿದ್ದು ನಗಲಾರಂಭಿಸಿದರು. ಸದ್ಯಕ್ಕೆ ಈ ಯೋಜನೆ ಕೈ ಬಿಡಲಾಗಿದೆ ಎಂದನು ಮಹಾರಾಜ.
ಹುಡುಗಿ ನಗುತ್ತಲೇ ಮನೆಗೆ ಹೋದಳು. ಮೂರನೇ ದಿನ ರಾಜನೇ ಮಂತ್ರಿಯ ಮನೆಗೆ ಬಂದು ಅವನ ಮಗಳನ್ನು ಮದುವೆ ಮಾಡಿಕೊಡುವಂತೆ ವಿನಂತಿಸಿದ.
ನೀತಿ :– ಬಿಡದ ಛಲದಿಂದ ಯೋಜನೆ ಫಲಿಸುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.