ಕಥೆ

ಕುಬೇರನ ಗರ್ವಭಂಗ ಮಾಡಿದ ಗಣೇಶ

ದಿನಕ್ಕೊಂದು ಕಥೆ

ಕುಬೇರನ ಗರ್ವಭಂಗ

ಒಮ್ಮೆ ಸಂಪತ್ತಿನ ಒಡೆಯನಾದ ಕುಬೇರನು ಶಿವನನ್ನೇ ಔತಣಕ್ಕೆಂದು ಆಮಂತ್ರಿಸಿದ.

ಆಗ ಅವನು ಶಿವನಿಗಾಗಿ ಒಂದು ಬಾಳೆ ಗೊನೆಯನ್ನಷ್ಟೇ ತಂದಿದ್ದ. ಶಿವಪುತ್ರ ಬೆನಕ ಅವನ ಜಿಪುಣತನಕ್ಕೆ ನಕ್ಕು ಒಂದೇ ಬಾರಿಗೆ ಎಲ್ಲವನ್ನೂ ತಿಂದೇ ಬಿಟ್ಟ. ಔತಣದಲ್ಲೂ ತನ್ನ ಸಿರಿವಂತಿಕೆಯನ್ನೇ ತೋರಿಸಲು ಮುಂದಾಗಿದ್ದ.

ಅರಮನೆಯಲ್ಲಿ ರತ್ನಗಂಬಳಿ ಹಾಸಿದ್ದ, ತಳಿರು ತೋರಣದಿಂದಲೇ ಸಿಂಗರಿಸಿದ್ದ. ಆಗ ಗಣೇಶನು ಕೊಚ್ಚೆಯು ಕಾಲಿನಿಂದಲೇ ಬಂದು ಆ ರತ್ನಗಂಬಳಿಯನ್ನು ಕೊಳಕಾಗಿಸಿದ. ನನಗೆ ತುಂಬಾ ಹಸಿವಾಗಿದೆ. ಸಾಕಷ್ಟು ಊಟ ಹಾಕಿ ಎಂದು ವಿನಂತಿಸಿಕೊಂಡ ಸೇವಕರು ಬಡಿಸದಂತೆಲ್ಲ ತಿಂದು ಖಾಲಿ ಮಾಡಿದ.

ಅಡಿಗೆಯವರು ಆಡಿಗೆ ಮಾಡಲಾಗದಂತೆ ಗಣೇಶನು ತಿನ್ನುತ್ತಲೇ ಹೋದ. ಕೊನೆಗೆ ಆವರೆಲ್ಲ ಸೋತರು ತೋಟದಲ್ಲಿನ ಹಸಿ ತರಕಾರಿ ಹಣ್ಣುಗಳನ್ನೆಲ್ಲ ತಂದು ನೀಡಲಾಯಿತು .

ಅವುಗಳನ್ನೆಲ್ಲವನ್ನು ಸೇವಿಸಿ ಗಣಪತಿ ಏನಾದರೂ ಕೊಡಿ ತಿನ್ನಲು. ನನ್ನ ಹಸಿವಿನ್ನೂ ನೀಗಲಿಲ್ಲವಲ್ಲ … ಎಂದೇ ಬಿಟ್ಟ, ಅರಮನೆಯಲ್ಲಿದ್ದ ದವಸಧಾನ್ಯಗಳೆಲ್ಲ ಖಾಲಿಯಾಗಿ ತರಕಾರಿ ಹಣ್ಣು ಹಂಪಲುಗಳೆಲ್ಲವೂ ಖರ್ಚಾಗಿದ್ದವು. ಸೇವಕರೆಲ್ಲ ಹೆದರಿ ಕುಬೇರನಿಗೆ ವಿಚಾರ ತಿಳಿಸಿದರು. ಕುಬೇರನಿಗೆ ತನ್ನ ತಪ್ಪಿನ ಅರಿವಾಯಿತು.

ಅವನು ಶಿವನ ಪಾದಗಳಿಗೆರಗಿ ಕ್ಷಮೆ ಬೇಡಿದ. ತಕ್ಷಣ ಗಣೇಶನಲ್ಲೂ ಕ್ಷಮಾ ಭಿಕ್ಷೆ ಕೇಳಿದ. ನಂತರ ಶಿವನೇ ಗಣೇಶನಿಗೆ ಒಂದು ಹಿಡಿ ಗರಿಕೆ ಹುಲ್ಲನ್ನು ಕಿತ್ತುಕೊಟ್ಟು ಇದನ್ನೇ ತಿಂದು ಹಸಿವನ್ನು ನೀಗಿಸಿಕೋ ಎಂದ. ಗಣೇಶ ಸೇವಿಸಿದ ಹಸಿವಿನಿಂದ ಪಾರಾಗಿ ನಲಿದ. ತಕ್ಷಣವೇ ಕುಬೇರ, ಗಣೇಶ ! ನಾನು ಕೇವಲ ನನ್ನ ಸಿರಿವಂತಿಕೆಯ ಪ್ರದರ್ಶನಕ್ಕೆಂದೇ ಈ ಔತಣ ಏರ್ಪಡಿಸಿದೆ

ಅಲ್ಲಿ ಭಕ್ತಿಯ ಎಳೆ ಕೂಡಾ ಇರಲಿಲ್ಲ. ಮಹಾಪರಾಧವಾಯಿತು. ದೇವಾ ಕ್ಷಮಿಸುಎಂದು ಪ್ರಾರ್ಥಿಸಿ ಕರಗಿಯೇ ಹೋದ. ಗಣೇಶನೆಂದ ದೃಢಭಕ್ತಿಯಿಂದ ಒಂದೇ ಒಂದು ಹಣ್ಣನ್ನು ನನಗಿತ್ತರೂ ನಾನದರಿಂದ ಸಂತೃಪ್ತನಾಗುವೆ ತಿಳಿ. ಅಂದಿನಿಂದ ಗಣೇಶನಿಗೆ ಗರಿಕೆ ಹುಲ್ಲೂ ಕೂಡಾ ಅತ್ಯಂತ ಪ್ರಿಯವಾಗಿದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button