ಎಂಎಲ್ಸಿ ಸ್ಥಾನಕ್ಕೆ ಕೈ ಮುಖಂಡ ಬಿ.ಕೆ.ಹರಿಪ್ರಸಾದ್ ರಾಜೀನಾಮೆ.?
ಸಷಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ರಾಜೀನಾಮೆಗೆ ಮುಂದಾದ ಹರಿಪ್ರಸಾದ್.?

ಎಂಎಲ್ಸಿ ಸ್ಥಾನಕ್ಕೆ ಕೈ ಮುಖಂಡ ಬಿ.ಕೆ.ಹರಿಪ್ರಸಾದ್ ರಾಜೀನಾಮೆಗೆ ನಿರ್ಧಾರ.?
ಸಚಿವ ಸ್ಥಾನ ಸಿಗದ ಕಾರಣ ರಾಜೀನಾಮೆ ಕುರಿತು ಆಪ್ತರೊಂದಿಗೆ ಸಮಾಲೋಚನೆ.!
ವಿವಿ ಡೆಸ್ಕ್ಃ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಮುಖಂಡ, ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಎಂಎಲ್ಸಿಗೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರವನ್ನು ಆಪ್ತರೆದುರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೂಡಲೇ ಈ ಕುರಿತು ಚಿಂತನೆ ನಡೆಸಿ ಪ್ರಕಟಿಸುವುದಾಗಿ ಅವರ ಆಪ್ತರಿಂದ ತಿಳಿದು ಬಂದದೆ.
ಎಂಎಲ್ಸಿ ಇಲ್ಲದ ಶಾಸಕರೂ ಇಲ್ಲದ ರಾಯಚೂರಿನ ಭೋಸರಾಜು ಅವರಿಗೆ ಸಚಿವ ಸ್ಥಾನ ನೀಡುವದು ಗ್ಯಾರಂಟಿ ಆದ ಹಿನ್ನೆಲೆ ಹರಿಪ್ರಸಾದ್ ಸೇರಿದಂತೆ ಪ್ರಬಲ ಆಕಾಂಕ್ಷಿಗಳಾದ ಪಕ್ಷದ ಹಿರಿಯರಲ್ಲಿ ಅಸಮಾಧಾನದ ಹೊಗೆ ಎದ್ದಿದೆ ಎನ್ನಲಾಗಿದೆ.
ಅಸಮಾಧಾನ ನಿವಾರಣೆಗೆ ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿಕೆಶಿ ಯಾವ ತಂತ್ರ ಉಪಯೋಗಿಸಲಿದ್ದಾರೆ.? ಯಾವ ರೀತಿ ಅಸಮಾಧಾನ ಹೋಗಲಾಡಿಸುವರು ಎಂಬುದು ಕಾದು ನೋಡಬೇಕಿದೆ. ಒಳಗೊಳಗೆ ಕೈ ಪಾಳೆಯದಲ್ಲಿ ಕಿಡಿ ಹೊತ್ತಿದ್ದು ಮುಂದೆ ಯಾವ ರೀತಿ ಬೆಂಕಿ ಹೊತ್ತಲಿದೆಯೋ ಅಥವಾ ಅಲ್ಲಿಗೆ ಶಾಂತಗೊಳಿಸಲಾಗಯವದೋ ಕಾದು ನೋಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.