ಡಿಎಂಕೆಯ ಸಚಿವ ಪೊನ್ಮುಡಿ ಎಬ್ಬಿಸಿದ ಹೊಸ ಗದ್ದಲ. ಏನದು..?
ಸನಾತನ ಧರ್ಮ ನಿರ್ಮೂಲನೆಗಾಗಿ I.N.D.I.A ಒಕ್ಕೂಟ ರಚನೆಯಂತೆ ಪೊನ್ಮುಡಿ ಸತ್ಯಾಂಶ ಹೇಳಿಕೆ - ಬಿಜೆಪಿ ಪ್ರತಿಕ್ರಿಯೆ
ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ಹೊತ್ತಿ ಉರಿಯುವ ವೇಳೆಯೇ ಮತ್ತೊಂದು ಕಿಡಿ ಹೊತ್ತಿಸಿದ ಡಿಎಂಕೆಯ ಪೊನ್ಮುಡಿ
ಡಿಎಂಕೆಯ ಪೊನ್ಮುಡಿ ಎಬ್ಬಿಸಿದ ಹೊಸ ಗದ್ದಲ ಏನದು..?
ವಿವಿ ಡೆಸ್ಕ್ ಡಿಎಂಕೆ ನಾಯಕ, ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ನಿರ್ಮೂಲನೆಗೆ ಒತ್ತಾಯಿಸಿ ಗದ್ದಲ ಎಬ್ಬಿಸಿದ ಕೆಲವೇ ದಿನಗಳಲ್ಲಿ, ಅವರ ಪಕ್ಷದ ಸಹೋದ್ಯೋಗಿ ಕೆ. ಪೊನ್ಮುಡಿ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ,
ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಏಕೈಕ ಉದ್ದೇಶದಿಂದ INDIA ಒಕ್ಕೂಟವನ್ನು ರಚಿಸಲಾಗಿದೆ ಎಂದು ಆರೋಪಿಸುವ ಮೂಲಕ ಸಮಾವೇಶದಲ್ಲಿ ಮಾತನಾಡಿದ ಪೊನ್ಮುಡಿ ಈ ಹೇಳಿಕೆ ನೀಡಿದ್ದಾರೆ.
ಪ್ರತಿಪಕ್ಷ ಭಾರತ (INDIA) ಮೈತ್ರಿಕೂಟದ ಎಲ್ಲಾ 26 ಪಕ್ಷಗಳು ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಮತ್ತು ಸನಾತನ ಧರ್ಮದ ತತ್ವಗಳು ಹೋರಾಡಲು ಒಗ್ಗೂಡಿವೆ ಎಂದು ಡಿಎಂಕೆ ನಾಯಕ ಹೇಳಿಕೆ ನೀಡಿರುವ ಒಕ್ಕೂಟದ ನಿಜ ಬಣ್ಣ ಬಯಲಾಗಿದೆ.
ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ವಿಚಾರದಲ್ಲಿ ನಾವೆಲ್ಲರೂ ಒಂದು ಒಂದೇ ವಿಚಾರವನ್ನು ಒಪ್ಪುತ್ತೇವೆ. ನಮಗೆಲ್ಲರಿಗೂ ಒಂದೇ ಬೇಕು, ಅದು ಸಮಾನತೆ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ರಕ್ಷಣೆ, ಲಿಂಗ ಸಮಾನತೆ ಈ ಬಗ್ಹೆ ನೀವು ಮತ್ತು ನಾನು ಮಾತ್ರ ಮಾತನಾಡಬಹುದು.
ಆದರೆ ನಾವು ರಾಜಕೀಯದಲ್ಲಿ ಗೆದ್ದಾಗ ಮಾತ್ರ ನಾವು ಬದಲಾವಣೆಗಳನ್ನು ಮಾಡಬಹುದು ಎಂದು ಅವರು ಹೇಳಿದ್ದಾರೆ.
ಈ ರೀತಿ ಮಾತನಾಡಿದ ಅವರ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಇದೀಗ ಎಲ್ಲಡೆ ವಿಪಕ್ಷ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವಿಪಕ್ಷಗಳ ಮೈತ್ರಿಯ ನಿಜ ಬಣ್ಣ ಬಯಲು - ಅಣ್ಣಾಮಲೈ
ಡಿಎಂಕೆಯ ಪೊನ್ಮುಡಿ ನೀಡಿರುವ ಹೇಳಿಕೆ ವಿಪಕ್ಷಗಳ INDIA ಮೈತ್ರಿ ಒಕ್ಕೂಟದ ನಿಜ ಬಣ್ಣ ಬಯಲು ಮಾಡಿದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಡಿಎಂಕೆ ಸಚಿವ ಪೊನ್ಮುಡಿ ಈಚೆಗೆ ಮಹಿಳಾ ಪ್ರತಿನಿಧಿಯ ಮೇಲೆ ಜಾತಿ ದ್ವೇಷವನ್ನು ಹರಡಿದ್ದು, ಇದೀಗ ಲಿಂಗ ಸಮಾನತೆ ಮತ್ತು ಸಮಾನತೆ ಕುರಿತು ವೇದಿಕೆಯೊಂದರಲ್ಲಿ ಮಾತನಾಡಿರುವದು ದುರದೃಷ್ಟರಕರ ಎನ್ನಲಾಗಿದೆ.