ದೋರನಹಳ್ಳಿ ದುರಂತಃ ಸಾವಿನ ಸಂಖ್ಯೆ 9 ಕ್ಕೆ ಏರಿಕೆ
ಸಿಲಿಂಡರ್ ಸ್ಪೋಟಃ 9 ಸಾವು
ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಸಿಲಿಂಡರ್ ಸ್ಪೋಟ ಘಟನೆಯಲ್ಲಿ ಮಂಗಳವಾರ ರಾತ್ರಿ ಇಬ್ಬರು ಮತ್ತೆ ಬುಧವಾರ ಮದ್ಯಾಹ್ನ ಇಬ್ಬರು ಗಾಯಾಳುಗಳು ಮೃತಪಟ್ಟಿದ್ದು ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.
ಗ್ರಾಮದ ಯುಕೆಪಿ ಕ್ಯಾಂಪ್ ನಲ್ಲಿ ಸಾಹೇಬಗೌಡ ಎಂಬುವವರ ಮನೆಯಲ್ಲಿ ಫೆ.25 ರಂದು ಸೀಮಂತ ಕಾರ್ಯಕ್ರಮದ ಸಂಭ್ರಮದ ವೇಳೆ ಸಿಲಿಂಡರ್ ಸ್ಪೋಟ್ ದುರ್ಘಟನೆ ನಡೆದು 24 ಜನ ಗಾಯಗೊಂಡಿದ್ದರು.
ಅದರಲ್ಲಿ ಇದುವರೆಗೆ 3 ಮಕ್ಕಳು ಸೇರಿದಂತೆ 9 ಜನ ಮೃತ ಪಟ್ಟಂತಾಗಿದೆ. ಇನ್ನೂ ಹಲವರು ಸಾವು ನೋವಿನ ಮಧ್ಯ ಕಲ್ಬುರ್ಗಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ರಾತ್ರಿ ಭೀಮರಾಯ (78), ವೀರಬಸಪ್ಪ (28) ಮೃತಪಟ್ಟಿದ್ದು, ಬುಧವಾರ ಮಧ್ಯಾಹ್ನ ಕಲ್ಲಪ್ಪ ಕಲಶೆಟ್ಟಿ (50) ಮತ್ತು ಚನ್ನವೀರ ಮ್ಯಾಳಗಿ (30) ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಗ್ರಾಮಕ್ಕೆ ಭೇಟಿ ನೀಡಿ ದುರ್ಘಟನೆಯಲ್ಲಿ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಅಲ್ಲದೆ ದುರ್ಘಟನೆ ಯಲ್ಲಿ ಮೃತರಾದ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನೂ ಇಬ್ಬರ ಸ್ಥಿತಿ ಗಂಭೀರವಿದೆ ಎನ್ನಲಾಗಿದೆ.
BREAKING NEWS – ಇದೀಗ ಬಂದ ಸುದ್ದಿ ಚನ್ನಪ್ಪ ಹಳ್ಳದ(50) ಮೃತಪಟ್ಟಿರುವ ಕುರಿತು ವರದಿ ಬಂದಿದ್ದು, ಸೊಲ್ಪ ಗೊಂದಲದಲ್ಲಿದೆ. ಅಧಿಕೃತ ವರದಿಗಾಗಿ ಕಾಯಲಾಗುತ್ತಿದೆ.
– ಮಲ್ಲಿಕಾರ್ಜುನ ಮುದ್ನೂರ