ಜನೋತ್ಸವ ಹೆಸರು, ನಿಗದಿತ ದಿನವೂ ಬದಲಾಯಿಸಿದ ಬಿಜೆಪಿ ಯಾಕೆ ಗೊತ್ತಾ.?
ಜನೋತ್ಸವ ಬದಲು ಜನಸ್ಪಂಧನ
ಬೆಂಗಳೂರಃ ದೊಡ್ಡಬಳ್ಳಾಪುರ ದಲ್ಲಿ ಈಗಾಗಲೇ ಜನೋತ್ಸವ ಕಾರ್ಯಕ್ರಮ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿತ್ತು.
ಆದರೆ ಇದೀಗ ನಿಗದಿತ ಕಾರ್ಯಕ್ರಮದ ಹೆಸರು ಬದಲಾವಣೆ ಜೊತೆಗೆ ನಿಗದಿತ ದಿನಾಂಕವು ಬದಲಾಯಿಸಲಾಗಿದೆ.
ಈ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಡಾ.ಸುಧಾಕರ, 11 ರ ಬದಲು 10 ನೇ ತಾರೀಖಿಗೆ ಕಾರ್ಯಕ್ರಮ ನಡೆಸಲು ದಿನಾಂಕ ಬದಲಾಯಿಸಿದೆ. 11 ರಂದು ಪಿತೃ ಪಕ್ಷ ಇರುವ ಕಾರಣ ಹಿರಿಯರ ಸಲಹೆ ಮೇರೆಗೆ 10 ರಂದು ಕಾರ್ಯಕ್ರಮ ನಡೆಯಲಿದೆ.
ಅಲ್ಲದೆ ಜನೋತ್ಸವ ಅಂದ್ರೆ ಜನರ ಹಬ್ಬ ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ಈ ಮೊದಲು ಆಯೋಜಿಸಲಾಗಿತ್ತು. ಪ್ರಸ್ತುತ ಅತಿವೃಷ್ಟಿಯಿಂದ ತೊಂದರೆಯಾಗಿರುವದರಿಂದ ಜನೋತ್ಸವ ಬದಲು ಜನಸ್ಪಂಧನ ಎಂದು ಕಾರ್ಯಕ್ರಮದ ಶೀರ್ಷಿಕೆ ಬದಲಾಯಿಸಲಾಗಿದೆ ಅದರಲ್ಲೇನಿದೆ ಎಂದು ಅವರು ಸ್ಪಷ್ಟ ಪಡಿಸಿದರು.
ಸಿಎಂ ಅವರಿಗೆ ಪಿತೃಪಕ್ಷ ಬಗ್ಗೆ ಗೊತ್ತಿರಲಿಲ್ಲ. ಶುಭಕರವಾಗಿರಲಿ ಜನರಿಗೂ ಸರ್ಕಾರಕ್ಕೂ ಒಳಿತಾಗಲಿ ಎಂಬ ಕಾರಣಕ್ಕೆ 10 ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಅತಿವೃಷ್ಟಿಯಿಂದ ರಾಜ್ಯದಲ್ಲಿ ಸಮಸ್ಯೆಗಳು ತಲೆ ದೋರಿದ ಹಿನ್ನೆಲೆ ಉತ್ಸವ ಅನ್ನೋದು ಸರಿಯಲ್ಲಕಾರಣಕ್ಕೆ ಜನಸ್ಪಂಧನ ವೆಂದು ಶೀರ್ಷಿಕೆ ಬದಲಾಯಿಸಲಾಗಿದೆ ತಪ್ಪೇನು.?
ಜನರ ಸಮಸ್ಯೆಗಳಿಗೆ ಯಾವ ರೀತಿ ಸರ್ಕಾರ ಸ್ಪಂಧಿಸುತ್ತಿದೆ. ಕೋವಿಡ್ ವೇಳೆ ಯಾವ ರೀತಿ ಕೆಲಸ ಮಾಡಿದೆ. ಅತಿವೃಷ್ಟಿಗೆ ಹಾನಿಗೊಳಗಾದ ಸಮಸ್ಯೆಗೆ ಯಾವ ರೀತಿ ಸ್ಪಂಧನೆ ನೀಡ್ತೀದೆ ಎಂಬುದು ಜನರ ಮುಂದಿಡುವ ನಿಟ್ಟಿನಲ್ಲಿ ಹೆಸರು ಬದಲಾಯಿಸಲಾಗಿದೆ ಎಂದು ವಿವರಿಸಿದರು.