ಪ್ರಮುಖ ಸುದ್ದಿ
ಡ್ರಗ್ಸ್ ಪ್ರಕರಣಃ ನಟಿ ರಾಗಿಣಿ, ಸಂಜನಾ ಡ್ರಗ್ ಸೇವನೆ FSL ವರದಿಯಲ್ಲಿ ದೃಢ
ಡ್ರಗ್ಸ್ ಪ್ರಕರಣಃ ನಟಿ ರಾಗಿಣಿ, ಸಂಜನಾ ಡ್ರಗ್ ಸೇವನೆ FSL ವರದಿಯಲ್ಲಿ ದೃಢ
ಬೆಂಗಳೂರಃ ಇಂದ್ರಜಿತ್ ಲಂಕೇಶ್ ನೀಡಿದ ಡ್ರಗ್ಸ್ ಮಾಫಿಯ ವಿರುದ್ಧದ ದೂರು ಇತ್ತೀಚೆಗೆ ಬಾರಿ ಸದ್ದು ಮಾಡಿತ್ತು.
ಇದೇ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಸಿಲುಕಿ ಕೆಲ ದಿನಗಳವರೆಗೆ ಜೈಲೂಟ ಸವಿದರು.
ಆದರೆ ಬೇಲ್ ಮೇಲೆ ಹೊರ ಬಂದಿದ್ದ ಅವರಿಗೀಗ ಶಾಕಿಂಗ್ ವರದಿ ಹೊರ ಬಿದ್ದಿದೆ.
ಎಫ್ ಎಸ್ ಎಲ್ ವರದಿ ಪ್ರಕಾರ ಈ ಇಬ್ಬರು ನಟಿಯರು ಡ್ರಗ್ಸ್ ಸೇವನೆ ಮಾಡಿರುವದು ದೃಢ ಪಡಿಸಿದ್ದು, ಮುಂದಿನ ಕ್ರಮಕ್ಕೆ ಒಳಪಡಬೇಕಿದೆ. ಈ ಕುರಿತು ನಟಿಯರಿಬ್ಬರು ಅಷ್ಟೆ ಅಲ್ಲದೆ ಡ್ರಗ್ಸ್ ಪ್ರಕರಣದಡಿ ಸಿಲುಕಿದ ಎಲ್ಲರೂ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂಬ ವರದಿ ಬಂದಿದೆ.
ಹೀಗಾಗಿ ಮುಂದಿನ ಕಾನೂನು ಕ್ರಮಕ್ಕೆ ಈ ಡ್ರಗ್ಗಿಣಿಯರು ಸೇರಿದಂತೆ ಇತರು ಒಳಗಾಗಲಿದ್ದು, ನ್ಯಾಯಾಲಯ ನೀಡುವ ಶಿಕ್ಷೆಗೆ ಗುರಿಯಾಗಬೇಕಾದ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.